ಮೈಸೂರು: ಮೈಸೂರಿನ ಶ್ರೀ ಹೊಸಮಠದ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಚಿದಾನಂದ ಸ್ವಾಮೀಜಿಯವರಿಗೆ ಚಾಮುಂಡಿಪುರಂ ಬಸವ ಬಳಗದ ವತಿಯಿಂದ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಟರಾಜ ವಿದ್ಯಾಸಂಸ್ಥೆಯ ಮೂಲಕ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿ, ಅವರ ಭವಿಷ್ಯಕ್ಕೆ ಬೆಳಕಾಗಿದ್ದ ಪೂಜ್ಯ ಶ್ರೀಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ಸದಾ ಸ್ಮರಣೀಯ ಎಂದು ಸ್ಮರಿಸಲಾಯಿತು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳ ಭಕ್ತ ವೃಂದದ ಪ್ರಮುಖರಾದ ಅಂಬಳೆ ಶಿವಣ್ಣ, ಸಿ. ಸಂದೀಪ್, ಗೆಜ್ಜಗಳ್ಳಿ ಶಂಕರ್, ಕೆ.ಆರ್. ಬ್ಯಾಂಕ್ ಭಾಸ್ಕರ್, ಪಾರ್ಥಸಾರಥಿ, ಮಹದೇವಸ್ವಾಮಿ, ಚಂದ್ರು, ಬಸವರಾಜು, ಪುರುಷೋತ್ತಮ್, ಮಂಜುಳ, ಪಾರ್ವತಿ, ಗಾಯತ್ರಿ, ಲತಾ, ಅನ್ನಪೂರ್ಣ, ಸುರೇಶ್, ರವಿ, ಗೋಪಾಲ್ ಅರಸ್, ಮೋಹನ್, ಲಕ್ಷ್ಮಣ್, ಮಹದೇವಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಪೂಜ್ಯರಿಗೆ ಭಾವಪೂರ್ಣ ನಮನ ಸಲ್ಲಿಸಿದರು.
