ಮೈಸೂರು: ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಮೈಸೂರಿನಲ್ಲಿ ನಡೆಯಲೇ ಇಲ್ಲ.
ಮೈಸೂರು ಸಹಜ ಸ್ಥಿತಿಯಲ್ಲೇ ಇತ್ತು,ನಗರ ಬಸ್ ನಿಲ್ದಾಣದಿಂದ ಬಸ್ಗಳ ಸಂಚಾರ ಎಂದಿನಂತೆ ಸಂಚರಿಸಿದವು.ಜನಜೀವನ ಕೂಡಾ ಸಹಜ ಸ್ಥಿತಿಯಲ್ಲೇ ಇದೆ,ಬಂದ್ ಲವಲೇಶವೂ ಇರಲಿಲ್ಲ.
ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತೆಯೇ ಕಂಡುಬಂದಿತು.ಸದಾಲಾ,ಕಾಲೇಜು ಕೂಡಾ ನಡೆದವು. ಅಂಗಡಿ-ಮುಂಗಟ್ಟುಗಳೂ ತೆರೆದಿದ್ದು ವ್ಯಾಪಾರವಹಿವಾಟು ಎಂದಿನಂತೆ ನಡೆದಿದೆ.
ಆದರೆ ಬಂದ್ಗೆ ಕೆಲ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿವು.
ನಗರದ ಕೆಲವೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದರು.
ಹಾಗಾಗಿ ಬಂದ್ ನಡೆಯಲಿಲ್ಲ ಮೈಸೂರಿನಲ್ಲಿ ಎಲ್ಕವೂ ಸಹಜವಾಗಿದೆ.ಕರ್ನಾಟಕ ಬಂದ್ ಸಾಂಕೇತಿಕ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು.
ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು,ಎಲ್ಲಾ ಕಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
