ಮೈಸೂರು: ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಶ್ರೀ ಮೃತ್ಯುಂಜಯೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ,ಪೂಜೆ ನೆರವೇರಿಸಲಾಯಿತು.
ಆಷಾಢ ಮಾಸದಲ್ಲಿ ಆಚರಿಸಲಾಗುವ ಭೀಮನ ಅಮಾಸ್ಯೆ ಅಥವಾ ನಾಗರ ಅಮಾಸ್ಯೆ ಪ್ರಯುಕ್ತ ಶ್ರೀ ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷವಾಗಿ ಪೂಜಿಸಲಾಯಿತು.
ದೇವಾಲಯದ ಶಿವಾರ್ಚಕರಾದ ಎಸ್.ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಅವರು,ಮುಂಜಾನೆಯೆ ಶಿವನಿಗೆ ವಿವಿಧ ಅಭಿಷೇಕ ನೆರವೇರಿಸಿ, ಪೂಜಿಸಿ ಮಹಾಮಂಗಳಾರತಿ ಮಾಡಿದರು.
ಮೃತ್ಯುಂಜಯೇಶ್ವರನಿಗೆ ಬೆಳ್ಳಿಯ ಮುಖವಾಡ ಮತ್ತಿತರ ಆಭರಣ ಧರಿಸಿ ಅಲಂಕಾರ ಮಾಡಲಾಗಿತ್ತು.
ಬಗೆ,ಬಗೆಯ ಹೂಗಳಿಂದ ಅಲಂಕಾರ ಮಾಡಿ ಪೂಜೆ ನೆರವೇರಿಸಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
