ಮೈಸೂರು: ಮೈಸೂರಿನಲ್ಲಿ ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷ
ಶಿವಕುಮಾರ ಪಟೀಕಾರ್ ಅವರನ್ನು ಪಕ್ಷದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.
ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿದ ರಾಜ್ಯ ಅಧ್ಯಕ್ಷರಾದ ಶಿವಕುಮಾರ ಪಟೀಕಾರ್ ಅವರನ್ನು ಮೈಸೂರು ನಗರ ಜೆಡಿಎಸ್ ಮುಖಂಡರುಗಳು ಆತ್ಮೀಯವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ್ ಪಾಟಿಕಾರ್ ಅವರು ಮೈಸೂರು ನಗರ ಜೆಡಿಎಸ್ ಮುಖಂಡರುಗಳೊಂದಿಗೆ ಪಕ್ಷದ ಸಂಘಟನೆಯ ವಿಚಾರ ಕುರಿತು ಚರ್ಚಿಸಿದರು
ಶೀಘ್ರದಲ್ಲೇ ರಾಜ್ಯ ಪದಾಧಿಕಾರಿಗಳ ನೇಮಕ ಆಗಲಿದ್ದು ನಂತರ ಮೈಸೂರು ನಗರದ ಹಿಂದುಳಿದ ವರ್ಗಗಳ ಸಂಘಟನೆಯ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಮೈಸೂರಿಗೆ ಆಗಮಿಸುವುದಾಗಿ ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 75 ಮಂದಿಗೆ ರಾಜ್ಯ ಪದಾಧಿಕಾರಿಗಳ ಸ್ಥಾನಮಾನ ಸಿಗಲಿದ್ದು ಹಿಂದುಳಿದ ವರ್ಗದ ಎಲ್ಲಾ ಜಾತಿ ಜನಾಂಗಗಳಿಗೆ ಪ್ರಾತಿನಿಧ್ಯ ನೀಡುವುದಾಗಿ ಶಿವಕುಮಾರ್ ಪಟೀಕಾರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪಿ. ಮಂಜುನಾಥ್, ಎಸ್ ಪ್ರಕಾಶ್ ಪ್ರಿಯಾದರ್ಶನ್, ರಾಕೇಶ್ ಮಿತ್ತಲ್, ರಿಜ್ವಾನ್, ಪಿ.ಎಂ. ಸಂಜೀವ್, ಪ್ರಕಾಶ್,ಕೃಷ್ಣಾಚಾರ್, ಪ್ಯಾಲೆಸ್ ಬಾಬು ಮತ್ತುತರರು ಹಾಜರಿದ್ದು ಶಿವಕುಮಾರ ಪಟೀಕಾರ್ ಅವರನ್ನು ಅಭಿನಂದಿಸಿದರು.
