ಮೈಸೂರು: ಇಂದು ರಾತ್ರಿ 10 ಗಂಟೆಯಿಂದ ಬುಧವಾರ ಬೆಳಗಿನವರೆಗೆ ಚಾಮುಂಡಿ ಬೆಟ್ಟಕ್ಕೆ ಎಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಪ್ರಯುಕ್ತ ಈ ಕ್ರಮ ಕೈಗೊಳ್ಳಲಾಗಿದೆ.
ಮಂಗಳವಾರ ಬೆಳಿಗ್ಗೆ 8.30.ರಿಂದ ರಾತ್ರಿ 8 ಗಂಟೆವರೆಗೆ ನಗರದ ಲಲಿತ ಮಹಲ್ ಪಾರ್ಕಿಂಗ್ ಸ್ಥಳದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಮೆಟ್ಟಿಲು ಮೂಲಕ ಹೋಗುವವರಿಗೆ ನಾಳೆ 7.30 ರಿಂದ ಅವಕಾಶ ಮಾಡಲಾಗಿದೆ ಎಂದು
ನಗರ ಪೊಲೀಸರು ತಿಳಿಸಿದ್ದಾರೆ.
