ಮೈಸೂರು: ವಿಪ್ರ ಮಹಿಳಾ ಸಂಗಮ ಹಾಗೂ ಶ್ರೀ ಉತ್ತರಾದಿಮಠ ಆಂಜನೇಯ ಸ್ವಾಮಿ ದೇವಸ್ಥಾನ ಸಹಯೋಗದಲ್ಲಿ 3 ನೇ ಆಷಾಡ ಶುಕ್ರವಾರ ಪ್ರಯುಕ್ತ 300 ಹೆಚ್ಚು ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಶ್ರೀ ಲಕ್ಷ್ಮದೇವಿಗೆ ಕುಂಕುಮಾರ್ಚನೆ ನೆರವೇರಿತು.
ಎಕೆಬಿಎಂಎಸ್ ಮೈಸೂರು ಪ್ರತಿನಿಧಿ ಡಾ.
ಲಕ್ಷ್ಮೀದೇವಿ ಹಾಗೂ ಸಂಸೃತ ವಿದ್ವಾಂಸರು ಮತ್ತು ಸರ್ಕಾರಿ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ನಾಗಲಕ್ಷ್ಮಿಚಂದ್ರಶೇಖರ್ ಅವರ ನೇತೃತ್ವದಲ್ಲಿ ಲಲಿತಾ ಸಹಸ್ರನಾಮ ಮತ್ತು ಶ್ರೀ ಲಕ್ಷ್ಮದೇವಿಗೆ ಕುಂಕುಮಾರ್ಚನೆಯು ವಿಧಿವತ್ತಾಗಿ ಉತ್ತರಾದಿಮಠ ಸತ್ಯಪ್ರೋಮೋದ ಕಲ್ಯಾಣಮಂಟಪದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನೆರವೇರಿತು.
300 ಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಭಾಗವಾಗಿ ಶ್ರೀ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ರಾಜ್ಯಾಧ್ಯಕ್ಷರು ಮತ್ತು ಕೆ. ರ್ . ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಆದ ಎನ್ ಎಂ. ನವೀನಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಕೆಬಿಎಂಎಸ್
ರಾಜ್ಯಕರ್ಯಕಾರಿಣಿ ಸದಸ್ಯರಾದ ಎಸ್.ಬಿ. ವಾಸುದೇವ ಮೂರ್ತಿ ಅವರು ಎಲ್ಲರಿಗೂ ಸ್ವಾಗತ ಕೋರಿದರು.
ಪ್ರಾಣದೇವರ ದೇವಸ್ಥಾನದ ಅಭಿವೃದ್ಧಿಗೆ ಸದಾ ದುಡಿಯುತ್ತಿರುವ ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಮಹೇಶ್ ಕಾಮತ್, ಕೊಡುಗೈ ದಾನಿ ಎಸ್ ಬುಜಂಗ , ಪ್ರದಾನ ಅರ್ಚಕರಾದ ಶ್ರೀ ನಾಗಭೂಷಣ ಆಚಾರ್ಯ,
ನಗರಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯಮೂರ್ತಿ, ಸುಮತಿ ಸುಬ್ರಮಣ್ಯ ಹಾಜರಿದ್ದರು.
ಪಂಡಿತ ವಿಜಯವಿಠ್ಠಲ ಆಚಾರ್ಯ ಕಾಡ್ಲೂರು ಎಲ್ಲರಿಗೂ ಸಂಕಲ್ಪ ವನ್ನು ಮಾಡಿಸಿದರು.ವ್ಯವಸ್ಥಾಪಕರಾದ ಶ್ರೀ ಪ್ರಮೋದ್ ಆಚಾರ್ಯ ಅವರು ಪ್ರಾಣದೇವರ ದೇವಸ್ಥಾನದ ಇತಿಹಾಸವನ್ನು ಮತ್ತು ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದ ಬಗ್ಗೆ ವಿವರಣೆಯನ್ನು ನೀಡಿ ವಂದನಾರ್ಪಣೆ ಮಾಡಿದರು.
ಈ ವೇಳೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
