ತುಮಕೂರು: ತುಮಕೂರು ತಾಲೂಕು ಬೆಳಗುಂಬ ಬಳಿ ಗರುಡ ಕೆಫೆ ಮುಂಭಾಗ
ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಭೀಕರ ಕೊಲೆ ಮಾಡಲಾಗಿದ್ದು,ಇಡೀ ಪಟ್ಟಣ ಬೆಚ್ಚಿ ಬಿದ್ದಿದೆ.
ಮಲ್ಲ@ವೀರಣ್ಣ (38) ಕೊಲೆಯಾದ ರೌಡಿಶೀಟರ್.
ನಾಲ್ಕೈದು ಮಂದಿ ದುಷ್ಕರ್ಮಿಗಳು ಲಾಂಗು ಮಚ್ಚು ಹಿಡಿದು ರಾತ್ರಿ 8.30 ಸುಮಾರಿಗೆ ರೌಡಿಶೀಟರ್ ಮಲ್ಲನ ಮೇಲೆ ಏಕಾಏಕಿ ದಾಳಿ ಮಾಡಿ ಮನ ಬಂದಂತೆ ಕೊಚ್ಚಿ ಹಾಕಿದ್ದಾರೆ.
ಬೆಳಗುಂಬ ನಿವಾಸಿ ರೌಡಿಶೀಟರ್ ಮಲ್ಲನನ್ನು
ಆತನ ಮನೆ ಸಮೀಪವೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
10 ವರ್ಷದ ಹಿಂದೆ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಮಲ್ಲ@ ವೀರಣ್ಣನ
ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು.
ಸ್ಥಳೀಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು,ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
