ಕೊಳ್ಳೇಗಾಲ: ಹನೂರು ಕ್ಷೇತ್ರದ ಪ್ರತಿ ಹಳ್ಳಿಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸುವುದು ನನ್ನ ಕನಸು ಎಂದು
ಹನೂರು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮಧುವನಹಳ್ಳಿ ಹಾಗೂ ಕಾಮಗೆರೆ ಗ್ರಾಮಗಳಲ್ಲಿ ಸುಮಾರು 1.96 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ರೈತರು, ಶ್ರಮಜೀವಿಗಳು ಮತ್ತು ಬಡವರ ಶ್ರೇಯೋಭಿವೃದ್ಧಿಗೆ ನಾನು ಸದಾ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಶುಚಿತ್ವ ಹಾಗೂ ಸುಲಭ ಸಂಚಾರದ ದೃಷ್ಟಿಯಿಂದ ಹಲವು ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಸಿಸಿ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಗ್ಯಾರೆಂಟಿ ಯೋಜನೆಗಳಿಂದ ಅನುದಾನ ಕೊರತೆಯಾಗಿದೆ ಆದರೂ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಅನುದಾನವನ್ನು ಹನೂರು ಕ್ಷೇತ್ರಕ್ಕೆ ನೀಡಿದ್ದಾರೆ,ಅವರನ್ನು ನಾನು ಸ್ಮರಿಸುತ್ತೇನೆ ಎಂದು ಹೇಳಿದರು.
ಹನೂರು ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು ಕ್ಷೇತ್ರದಲ್ಲಿ ರಸ್ತೆ ಕೆರೆಕಟ್ಟೆಗಳ ಅಭಿವೃದ್ಧಿಗೆ 370 ಕೋಟಿ ರೂ. ಅನುದಾನವನ್ನು ಈ ಹಿಂದೆ ಸರ್ಕಾರ ನೀಡಿತ್ತು ಮುಂದುವರೆದು 1 ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 500 ರಿಂದ 600 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಮಂತ್ರಿಗಳಾಗಿದ್ದ ಕ್ಷೇತ್ರಗಳಲ್ಲಿ ಇಷ್ಟೊಂದು ಕೆಲಸಗಳು ಆಗಿಲ್ಲಾ, ಇಷ್ಟೊಂದು ಅನುದಾನವನ್ನು ನಾನು ತಂದು ಕ್ಷೇತ್ರವನ್ನು ಶ್ರಮವಹಿಸಿ ಅಭಿವೃದ್ದಿ ಮಾಡುತ್ತಿದ್ದೇನೆ ಎಂದು ಶಾಸಕರು ಹೇಳಿದರು.
ಕಾಮಗೆರೆ ಮುಖ್ಯರಸ್ತೆಯಿಂದ ಗುಂಡಾಲ್ ಡ್ಯಾಂ ವರೆಗಿನ ರಸ್ತೆ ಅಭಿವೃದ್ಧಿಯಿಂದ ದಶಕಗಳ ಬೇಡಿಕೆ ಈಡೇರಿದೆ. ಇದರಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಧುವನಹಳ್ಳಿ ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ಸುಮಾರು 9 ಕೋ ಅಂದಾಜು ಮಾಡಲಾಗಿದೆ. ಗ್ರಾಮದ ಅಪೂರ್ಣಗೊಂಡಿದ್ದ ಉಪ್ಪಾರ ಸಮುದಾಯ ಭವನದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತ ಗೊಳಿಸಲಾಗುವುದು. ಈ ಭವನ ನಿರ್ಮಾಣಕ್ಕೆ ಉಪ್ಪಾರ ಅಭಿವೃದ್ಧಿ ನಿಗಮ ಬಿಸಿಎಂ ನಿಗಮಗಳಲ್ಲಿ ಅನುದಾನ ಕೇಳಿದ್ದೆ ಆದರೆ ಎಲ್ಲಿಯೂ ಅನುದಾನ ಲಭ್ಯವಾಗದೆ ತಡವಾಯಿತು ಎಂದು ಬೇಸರ ಪಟ್ಟರು.
ಮದುವನಹಳ್ಳಿ ತುಂಬಾ ಜನಸಂಖ್ಯೆಯುಳ್ಳದ್ದಾಗಿದೆ, ಜನರು ತುಂಬಾ
ಇಕ್ಕಟ್ಟಾದ ಮನೆಗಳಲ್ಲಿ ಬಹಳ ನಿಕೃಷ್ಟವಾಗಿ ವಾಸಿಸುತ್ತಿದ್ದಾರೆ. ಆದ್ದರಿಂದ ಈ ಸಮುದಾಯ ಭವನ ನಿರ್ಮಾಣ ಆದರೆ ಈ ಜನರಿಗೆ ಉಪಯುಕ್ತವಾಗಲಿದೆ ಅದಕ್ಕೊಂದು ನನ್ನದೇ ಆದ ಕಾಯಕಲ್ಪ ಇದೇ ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ಶಾಸಕರು ಶಪತ ಮಾಡಿದರು.
ನಿವೇಶನಕ್ಕೆ ಸ್ಥಳ ಗುರುತು ಮಾಡಿ ನಂತರ ಆಶ್ಚರ್ಯಕರವಾಗಿ ಹೇಳುತ್ತೇನೆ ಯಾರಿಗೆ ಮನೆ ಅವಶ್ಯಕತೆ ಇದೆಯೋ ಅವರ ಮನೆಗಳಿಗೆ ನಾನು ಮತ್ತು ಗ್ರಾಮಸ್ಥರು ತೆರಳಿ ಗುರುತು ಮಾಡುವ ಕೆಲಸವನ್ನು ಮಾಡಬೇಕಾಗಿದೆ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬೇಕಾಗಿಲ್ಲಾ 15 ಸಾವಿರ ಹೆಚ್ಚು ಜನಸಂಖ್ಯೆಯಿರುವ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸುತ್ತೇನೆ ಆಸ್ಪತ್ರೆ, ಕುಡಿಯುವ ನೀರು, ನಿವೇಶನ,ಇತರೆ ಮೂಲಭೂತ ಸೌಕರ್ಯಗಳಾದರೆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಅತ್ಯಂತ ಪಾರದರ್ಶಕವಾಗಿ ಗುಣ ಮಟ್ಟದ ಹಾಗೂ ನಿಗದಿತ ಕಾಲ ಮಿತಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದು
ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಶಾಸಕ ಎಂ.ಆರ್ ಮಂಜುನಾಥ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಆರ್.ಡಿ.ಎಲ್. ಎಇಇ ಚಿಕ್ಕಲಿಂಗಯ್ಯ, ಜೆಇ ಕಾರ್ತಿಕ್, ಮುಖಂಡರಾದ ಸಿಂಗನಲ್ಲೂರು ರಾಜಣ್ಣ, ಮಂಜೇಶ್ ಗೌಡ, ನಟರಾಜು ಗೌಡ, ಜೇಸಿಂ ಪಾಷ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಮೇಶ್, ಶಿವು, ರಾಕೇಶ್, ಕಿಶೋರ್, ಗುರುಮೂರ್ತಿ, ಗುರುಸ್ವಾಮಿ, ಮಾದಮ್ಮ, ಬಸವಣ್ಣ, ಶಿವಮಲ್ಲು, ತಮ್ಮಯ್ಯ ಶೆಟ್ಟಿ, ನಂಜುಂಡ, ನಟೇಶ್, ಚಿನ್ನಸ್ವಾಮಿ, ಅರಸಶೆಟ್ಟಿ, ಮೋಹನ್ ಕುಮಾರ್, ಗೋವಿಂದ, ಪ್ರಭುಸ್ವಾಮಿ, ಶ್ರೀನಿವಾಸ್, ಪುಟ್ಟರಾಜು ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರಿದ್ದರು.
