ಮೈಸೂರು: ಆಷಾಢ ಶುಕ್ರವಾರ ಪ್ರಯುಕ್ತ ಪ್ರಮಥ ಸ್ನೇಹ ಬಳಗದ ವತಿಯಿಂದ 3ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮವನ್ನು ತ್ಯಾಗರಾಜ ರಸ್ತೆ, 6ನೇ ಕ್ರಾಸ್ನಲ್ಲಿರುವ ಪ್ರಮಥ ಪ್ರಿಂಟ್ಸ್ ಕಚೇರಿ ಬಳಿ ಭಕ್ತಿಭಾವದಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ನೆರವೇರಿಸಿ, ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ. ಚಂದ್ರಶೇಖರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಿ.ವಿ. ಮಂಜುನಾಥ್ ಮತ್ತು ಎಂ. ಸುನೀಲ್, ವಿಜ್ಞಾನ ಸಂಪಾದಕರಾದ ಎಸ್. ರಾಮಪ್ರಸಾದ್, ಬಿ.ಎಂ.ಎಸ್. ಪ್ರಸಾದ್, ಪುಟ್ಟಮಾದಪ್ಪ, ವಕೀಲ ಕುಮಾರ್, ಪ್ರಮಥ ಮಂಜುನಾಥ್, ನಾಗರಾಜು, ದಿಡ್ಡಹಳ್ಳಿ ರಘು, ತೇಜಸ್ವಿನಿ, ಮನು, ರಾಜೇಶ್, ನಾಗಶಿಲ್ಪ, ವಿನೋದ್, ಲಿಖಿತ್, ಧನುಷ್, ಪ್ರಕಾಶ್, ಪುಷ್ಪರಾಜ್, ಗಣೇಶ್ ಲಾಡ್, ಯಶ್ವಂತ್ ಮುಂತಾದವರು ಹಾಜರಿದ್ದರು.
ಪೂಜಾ ಕಾರ್ಯಕ್ರಮ ಸ್ನೇಹಿತರ ಸಹಕಾರ ಹಾಗೂ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.
