ಮೈಸೂರು: ಎರಡನೇ ಆಷಾಢ ಶುಕ್ರವಾರದ ಅಂಗವಾಗಿ,ಚಾಮುಂಡೇಶ್ವರಿ ಅಮ್ಮನವರಿಗೆ
ಶಿವಾರ್ಚಕರ ಸಂಘದ ಗೌರವಾಧ್ಯಕ್ಷರ ವತಿಯಿಂದ ಪೂಜೆ ನೆರವೇರಿಸಲಾಯಿತು.
ಊಟಿ ರಸ್ತೆ, ಗಣಪತಿ ಆಶ್ರಮದ ಹತ್ತಿರ ರಾಜ್ಯ ಶಿವಾರ್ಚಕರ ಸಂಘದ ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ ಹಾಗೂ ಅವರ ಮಕ್ಕಳು ಅನಿಲ್ ಮತ್ತು ಸುನಿಲ್ ಕುಟುಂಬದವರಿಂದ 9ನೇ ವರ್ಷದ ಪೂಜಾ ಮಹೋತ್ಸವ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ಸಿ. ಸಂದೀಪ್, ಮಹೇಶ್, ನಾಗಣ್ಣ, ಮೋಹನ್, ರಾಜೇಂದ್ರ, ವಿನೋದ್, ರಾಘವೇಂದ್ರ, ಅರುಣ್, ಸರ್ವೇಶ್, ಯಶವಂತ್, ಪ್ರವೀಣ್, ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
