ಮೈಸೂರು: ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಭಾರತದ ಸಂಖ್ಯಾಶಾಸ್ತ್ರ ಪಿತಾಮಹ
ಪ್ರೊ. ಪ್ರಶಾಂತ ಚಂದ್ರ ಮಹಲನೊಬಿಸ್ ರವರ 133 ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಮೈಸೂರು ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ವಿಭಾಗದ ಡಾ. ಪ್ರವೀಣಾ ಎ. ಎಸ್. ಅವರು ಆಗಮಿಸಿದ್ದರು.
ಡಾ.ಪ್ರವೀಣ ಅವರು ಬದಲಾಗುತ್ತಿರುವ ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಂಖ್ಯಾಶಾಸ್ತ್ರ ವಿಷಯದ ಮಹತ್ವ, ಅನ್ವಯಿಕೆ ಮತ್ತು ಲಭ್ಯವಿರುವ ಹಲವಾರು ಔದ್ಯೋಗಿಕ ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಿವಣ್ಣ ಬಿ ಕೆ, ಅಧ್ಯಾಪಕರುಗಳಾದ ಡಾ. ಚೇತನ ಮಲಗಾವಿ, ಮಲ್ಲಿಕಾರ್ಜುನ ಚಂದಣ್ಣವರ, ಡಾ. ಅರ್ಚಿತಾ, ಸಂತೋಷ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಎಂ ಎನ್, ಚೇತನ ಹಂಜಿ ಹಾಗೂ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
