ಮೈಸೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರಿಕ್ಷೇ ನೀಟ್ -2026 ರಲ್ಲಿ ಮೈಸೂರಿನ ಯಜತ್ ಪರಸ್ 99.9026949 ಪರ್ಸೆಂಟೈಲ್ ಅಂಕಗಳೊಂದಿಗೆ 1895 ಆಲ್ ಇಂಡಿಯಾ ರ್ಯಾಂಕ್ ಹಾಗೂ ಕೆಟಗರಿಯಲ್ಲಿ 54 ನೇ
ರ್ಯಾಂಕ್ ಪಡೆದಿದ್ದಾರೆ.
ಈ ಮೂಲಕ ದೇಶದ ಪ್ರತಿಷ್ಠಿತ ವ್ಯೆದ್ಯಕೀಯ ಕಾಲೇಜು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಯಜತ್ ಅವರು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರುಗಳಾದ ಡಾ. ಶೋಭಲತ ಎನ್. ಮತ್ತು ಡಾ. ಪರಶಿವಮೂರ್ತಿ ಎಚ್. ಎಸ್. ದಂಪತಿಯ ಪುತ್ರ.
ಮಾಹಿತಿಗೆ 9964726789 ಸಂಪರ್ಕಿಸಬಹುದು.
