ಕೊಳ್ಳೇಗಾಲ: ಕೊಳ್ಳೇಗಾಲದ ಅಃಜುಮಾನ್ ಇಸ್ಲಾಮಿಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಮೀನ ಮಸೀದಿಯ ಅಭಿಬ್ ಪಾಷ,ಉಪಾಧ್ಯಕ್ಷರಾಗಿ ಖುದ್ದೂಸಿಯಾ ಮಸೀದಿಯ ಆಯುಬ್ ಖಾನ್ ಹಾಗೂ ಕಾರ್ಯದರ್ಶಿಯಾಗಿ ಮೆಹಬೂಬಿಯ ಮಸೀದಿಯ ಅಬ್ದುಲ್ ಖಾದರ್ ಅವರು ಆಯ್ಕೆಯಾಗಿದ್ದಾರೆ.
ಪಟ್ಟಣದ ಅಃಜುಮಾನ್ ಇಸ್ಲಾಮಿಯ ಸಂಕೀರ್ಣದಲ್ಲಿ ಸಮಿತಿಯ ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಜಿಲ್ಲಾ ವಕ್ಪ್ ಬೋರ್ಡ್ ಅಧಿಕಾರಿ ಆಶೀಫ್ ಪಾಷ ಅವರು ಚುನಾವಣಾಧಿಕಾರಿ ಯಾಗಿ ಆಗಮಿಸಿದ್ದರು.
ಪದಾಧಿಕಾರಿ ಗಳ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ಮುಯಿಬುಲ್ಲಾ ಷರೀಫ್, ಹಾಗೂ ಅಭಿಬ್ ಪಾಷ, ಉಪಾಧ್ಯಕ್ಷ ಸ್ಥಾನಕ್ಕೆ ಮಹಾಮದ್ ಮತಿನ್ ಹಾಗೂ ಆಯುಬ್ ಖಾನ್ , ಕಾರ್ಯದರ್ಶಿ ಸ್ಥಾನಕ್ಕೆ ಅಬ್ದುಲ್ ಖಾದರ್ ಹಾಗೂ ಜಮೀಲ್ ಪಾಷರವರು ಸ್ಪರ್ಧಿಸಿದ್ದರು.
ಅಂತಿಮವಾಗಿ ಅಧ್ಯಕ್ಷರಾಗಿ ಅಭಿಬ್ ಪಾಷ ಉಪಾಧ್ಯಕ್ಷರಾಗಿ ಆಯುಬ್ ಖಾನ್ ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶೀಫ್ ಪಾಷ ಅವರು ಘೋಷಿಸಿದರು.
ಖಜಾಂಚಿಯಾಗಿ ಅಬ್ದುಲ್ ಜಬೀವುಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಆಸ್ಥಾನವನ್ನು ಹೊರತುಪಡಿಸಿ ಉಳಿದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅಃಜುಮಾನ್ ಇಸ್ಲಾಮಿಯಲ್ಲಿ 1845 ಸದಸ್ಯರಿದ್ದು,15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು 35 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈ ವೇಳೆ ಮಹಮ್ಮದ್ ಮುಯಿಬುಲ್ಲಾ ಷರೀಫ್, ಆಯಾಜ್ ಪಾಷ, ಮಹಮ್ಮದ್ಅತೀಕ್ ಪಾಷ, ಆಯೂಬ್ ಖಾನ್, ಎ.ವಾಸಿಂ ಅಹಮ್ಮದ್, ಅಬ್ದುಲ್ ಜಬೀವುಲ್ಲಾ, ಹಭೀಬ್ ಪಾಷ, ಅಬ್ದುಲ್ಸಾದೀಕ್, ಫಾಜೀವುಲ್ಲಾ ಖಾನ್ ಎಂ.ಆರ್, ಅಬ್ದುಲ್ ಖಾದರ್.ಎ, ಜಮೀಲ್ ಪಾಷ, ಮಹಾಮದ್ ಮತಿನ್ , ಎ.ಅಲ್ತಾಫ್, ಸಜ್ಜಾದ್ ಪಾಷ, ವಾಸಿಂ ಪಾಷರವರು ಸೇರಿ ಒಟ್ಟು 15 ಮಂದಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದರು. ಆ ಹಿನ್ನಲೆಯಲ್ಲಿ ಇಂದು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಭಿಬ್ ಪಾಷ ಮಾತನಾಡಿ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಮುದಾಯದ ಶಾದಿ ಮಹಲ್ ಕಟ್ಟಡವನ್ನು ಪೂರ್ಣ ಗೊಳಿಸಿ, ಲೋಕಾರ್ಪಣೆ ಗೊಳಿಸಿ ಸಮುದಾಯದ ಸೇವೆಗೆ ಅರ್ಪಿಸುವುದಾಗಿ ಭರವಸೆ ನೀಡಿದರು.
ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಹಾಗೂ ಪ್ರಸ್ತುತ ಈದ್ಗಾ ಮೊಹಲ್ಲದಲ್ಲಿರುವ ಸ್ಮಶಾನ (ಖಬರ್ ಸ್ಥಾನ) ಸಾಲುವುದಿಲ್ಲ. ಹಾಲಿ ಇರುವ ಸ್ಮಶಾನವನ್ನು ಅಭಿವೃದ್ಧಿಪಡಿಸಿ, ಬೇರೆಡೆ ಮತ್ತೊಂದು ಸ್ಮಶಾನಕ್ಕೆ ಸ್ಥಳ ಗುರುತಿಸಿ ಸಮುದಾಯಕ್ಕೆ ಕೊಡುಗೆ ನೀಡುತ್ತೇನೆ, ಸಂಸ್ಥೆಯ ಆಸ್ತಿಯನ್ನು ರಕ್ಷಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
