ಥೈಲ್ಯಾಂಡ್: ಥೈಲ್ಯಾಂಡ್ನ ಮುಕ್ದಾಹನ್ ಪ್ರಾಂತ್ಯದಲ್ಲಿ ಬಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅಪಘಾತ ಸಂಭವಿಸಿದ ಪರಿಣಾಮ 10 ಮಂದಿ ಬೌದ್ಧ ಬಿಕ್ಕುಗಳು ದಾರುಣವಾಗಿ ಮೃತಪಟ್ಟಿದ್ದಾರೆ.
ಥೈಲ್ಯಾಂಡ್ನ ಈಶಾನ್ಯ ಭಾಗದಲ್ಲಿರುವ ಮುಕ್ದಾಹನ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ.
ತೀರ್ಥಯಾತ್ರೆ ಕೈಗೊಂಡಿದ್ದ ಬೌದ್ಧ ಬಿಕ್ಕುಗಳು ನಡೆದು ಹೋಗುತ್ತಿದ್ದರು.ಇದೇ ವೇಳೆ 11 ವರ್ಷದ ಬಾಲಕ ತನ್ನ ಪೋಷಕರ ಪಿಕಪ್ ಟ್ರಕ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ.
ಸುಮಾರು 35 ಬೌದ್ಧ ಸನ್ಯಾಸಿಗಳ ಗುಂಪು ಧಾರ್ಮಿಕ ಯಾತ್ರೆಗಾಗಿ ರಸ್ತೆಯ ಬದಿಯಲ್ಲಿ ಸಾಲಾಗಿ ನಡೆದು ಹೋಗುತ್ತಿದ್ದರು. ಆಗ 11 ವರ್ಷದ ಬಾಲಕ ಪೋಷಕರ ಕಾರನ್ನು ವೇಗವಾಗಿ ಗುಂಪಿನ ಮೇಲೆ ನುಗ್ಗಿಸಿದ್ದಾನೆ.
ಪೋಷಕರು ಮನೆಯಲ್ಲಿಲ್ಲದ ವೇಳೆ ಬಾಲಕ ಕಾರನ್ನು ತೆಗೆದುಕೊಂಡು ಹೋಗಿದ್ದು ಈ ಬೀಕರ ಅಪಘಾತ ಉಂಟುಮಾಡಿದ್ದಾನೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
