ಮೈಸೂರು: ವೀರನಗೆರೆ ಸ್ವಯಂ ಸೇವಕ ತಂಡ ಹಾಗೂ ವೀರನಗೆರೆ ರಕ್ಷಣಾ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರನಗೆರೆಯ ಮಹದೇಶ್ವರ ದೇವಸ್ಥಾನ ಆವರಣವನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.
ವೀರನಗೆರೆ ನೀರಿನ ಟ್ಯಾಂಕ್ ಉದ್ಯಾನವನ ಹಲವಾರು ವರುಷಗಳಿಂದ ಸ್ವಚ್ಛತೆ ಕಾಣದೇ ಕುಡುಕರಿಗೆ ನೆಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮಿತಿಯು ಸ್ವ ಇಚ್ಛೆಯಿಂದ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಒಂದು ಟ್ಯ್ರಾಕ್ಟರ್ ಕಸವನ್ನು ಸಂಗ್ರಹಿಸಿದೆ.
ಸಾಮಾಜಿಕ ಕಾರ್ಯಕರ್ತೆ ಆರ್.ಯಶೋಧ ಒಳಗೊಂಡಂತೆ ಸಮಿತಿಯ ನಕ್ಷತ್ರ ವಿಜಯ್, ಚಂದು, ರಾಘವೇಂದ್ರ, ರವಿ, ಶಿವಕುಮಾರ್, ಬಸವಣ್ಣ, ಶ್ರೀಕಂಠಮೂರ್ತಿ, ಬಸವರಾಜು, ಕುಮಾರ್ ಸೇರಿದಂತೆ ಮೊಹಲ್ಲಾ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
