ಮೈಸೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುದೇವ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಆಚರಣೆ ಅಂಗವಾಗಿ
ತೆರೆಮರೆಯ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಲಲಿತಾದ್ರಿಪುರ ದಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಇಂದು ನಡೆದ ಸಮಾರಂಭದಲ್ಲಿ ಕೆ ಆರ್ ಪೇಟೆ ತಾಲೂಕಿನ ಪ್ರಖ್ಯಾತ ವೈದ್ಯರಾದ ಆರ್ ಟಿ ವೆಂಕಟೇಶ್ ಹಾಗೂ ಮಡಿಕೇರಿಯ ಪ್ರಖ್ಯಾತ ಪತ್ರಕರ್ತರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ತೆರೆ ಮರೆಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಯೋಗ ಶಿಕ್ಷಕರಾದ ರಾಜಲಕ್ಷ್ಮಿ ಕೆ, ವೆಂಕಟೇಶ್ ಎಸ್ ಆರ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಕೌಶಿಕ ಸ್ವಾಮೀಜಿ ಹಾಗೂ ದಿವ್ಯಪಾದ ಸ್ವಾಮೀಜಿ ಅವರು ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಆಶ್ರಮದ ಸ್ವಯಂ ಸೇವಕರಾದ ವೀಣಾ, ಗೋಕುಲ್, ಅಪೂರ್ವ ಸುರೇಶ್, ರವಿಕುಮಾರ್ ಆನಂದ್, ನಾಗ ನಂದಿನಿ , ಮಹೇಶ್, ಪ್ರತಿಭಾ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
