ಮೈಸೂರು: ಕಾಂಗ್ರೆಸ್ ಕುಶಲಕರ್ಮಿ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷರು ಹಾಗೂ ನಗರಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜಲದರ್ಶಿನಿ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಯಿತು.
ಕೆ.ಪಿ.ಸಿ.ಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಪ್ರಭಾವಿ ರಾಜ್ಯ ಮುಖಂಡರಾದ ಆರ್.ಪ್ರಸನ್ನಕುಮಾರ್,ಮೈಸೂರು ಜಿಲ್ಲಾ ಕಾಂಗ್ರೆಸ್ ಕುಶಲಕರ್ಮಿ ವಿಭಾಗದ ಜಿಲ್ಲಾಧ್ಯಕ್ಷರಾದ ಬನ್ನೂರು ನಾಗರಾಜಚಾರ್,ನಗರಾಧ್ಯಕ್ಷರಾದ ನಾಗರಾಜು ಅವರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಸನ್ನಕುಮಾರ್ ಮಾತನಾಡಿ, ಕೆಪಿಸಿಸಿ ಕುಶಲಕರ್ಮಿ ವಿಭಾಗವು ಕಳೆದ 3ವರ್ಷಗಳ ಹಿಂದೆ ನೂತನವಾಗಿ ಪ್ರಾರಂಭ ಗೊಂಡು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಈ ವಿಭಾಗಕ್ಕೆ ನನ್ನನ್ನೇ ಮೊದಲ ಅಧ್ಯಕ್ಷರನ್ನಾಗಿ ಮಾಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ವಿಭಾಗದಲ್ಲಿ ಬರುವ ಸಣ್ಣ ಸಣ್ಣ ಕುಶಲಕರ್ಮಿಗಳ ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ದೊರಕಿಸಿವುದಾಗಿ ಭರವಸೆ ನೀಡಿದರು.
ಅತೀ ಶೀಘ್ರದಲ್ಲಿ ಜಿಲ್ಲಾ ಮತ್ತು ನಗರದ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಮವನ್ನು ಮಾಡುವುದಾಗಿ ತಿಳಿಸಿದರು.
ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ರಿಷಿ ವಿಶ್ವಕರ್ಮ,ರಾಜ್ಯ ಒಬಿಸಿ ಕಾರ್ಯದರ್ಶಿ ಎಂ ಮೊಗಣ್ಣಚಾರ್ ಅವರು ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವಸಂತ್ ಕುಮಾರ್, ಗಿರೀಶ್,ಅಲನಹಳ್ಳಿ ಸಿದ್ದಪ್ಪ, ಕಿರಣ್,ವಿವೇಕ್ ಬನ್ನೂರು ಸಿದ್ದರಾಜು,ಚೆಲುವರಾಜು , ನಂಜನಗೂಡು ವಿನಯ್, ಪಿರಿಯಾಪಟ್ಟಣ ಹಿರಣ್ಣಯ್ಯ, ತಿರು ನೀಲಕಂಠ, ಕೆ ಆರ್ ನಗರದ ಪುಟ್ಟಣ್ಣ, ಸರಗೂರು ಕೆಂಡಗಣ್ಣ ಸ್ವಾಮಿ, ಹೆಗ್ಗಡದೇವನಕೋಟೆ ಮೋಹನ್ ಕುಮಾರ್, ಯೆಡಿಯಲಾ ಪ್ರಕಾಶ್,
ಮಹದೇವು, ಮಹದೇವ್ ಶೆಟ್ರು,ಹೆಚ್.ಎನ್. ರಾಜು, ಪೈಂಟರ್ ಮಹದೇವ್, ಸಿದ್ದಪ್ಪಾಜಿ ಕೆಂಪಯ್ಯನ ಹುಂಡಿ ಲೋಕೇಶ್,ಕೆ.ಆರ್. ನಗರ ತೇಜಕುಮಾರ್, ಸಾಲಿಗ್ರಾಮದ ಪ್ರಸನ್ನ,ವರುಣ ಮಂಜು, ಕೃಷ್ಣಚಾರ್,ಜಯಪುರ ತಮ್ಮಣ್ಣಚಾರ್, ಮಂಟೇಸ್ವಾಮಿ ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು.
