ಯಳಂದೂರು: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಕ್ಷ ಯಳಂದೂರು ಬ್ಲಾಕ್ ಸಮಿತಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವತಿಯಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಅಂಗವಾಗಿ ಬಹುಜನರ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಿ ಎಸ್ ಪಿ ಕೇಂದ್ರಿಯ ಉಸ್ತುವಾರಿ ನಿತಿನ್ ಸಿಂಗ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು,
ಬಹುಜನ ಸಮಾಜ ಚಳವಳಿಯ ರೂವಾರಿಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಒಬ್ಬರು. ಅವರು ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿ ಅನೇಕ ಜನಪರ ಕಾರ್ಯಗಳನ್ನು ಮಾಡಿದವರು ಎಂದು ತಿಳಿಸಿದರು.
ಅವರ ಸಾಧನೆ ಇತಿಹಾಸ ಪುಟಗಳಲ್ಲಿ ಬೆರೆತುಹೋಗಿದೆ. ಇದನ್ನು ಹುಡುಕಿ ಜನರಿಗೆ ತಿಳಿಸಿದವರು ಮಾನ್ಯವರ್ ಕಾನ್ಸಿರಾಂ ರವರು. ಬುದ್ಧ, ಬಸವ, ಜ್ಯೋತಿ ಬಾ ಫುಲೆ, ಶಾಹುಮಹಾರಾಜ್, ಪೆರಿಯರ್ ರಾಮಸ್ವಾಮಿ ನಾಯ್ಕರ್,ನಾರಾಯಣಗುರು, ಅಂಬೇಡ್ಕರ್. ಈ ಮಹಾಪುರುಷರು ಕಟ್ಟಿದ ಚಳುವಳಿಯೇ ಬಹುಜನ ಸಮಾಜ ಚಳುವಳಿಯಾಗಿದೆ ಎಂದು ವಿವರಿಸಿದರು.
ಈ ದೇಶದ ಎಸ್ಸಿ ಎಸ್ಟಿ, ಒಬಿಸಿ, ಧಾರ್ಮಿಕ ಅಲ್ಪಸಂಖ್ಯಾತರು ರಾಜ್ಯಾಧಿಕಾರವನ್ನು ಪಡೆಯಬೇಕಾದರೆ ನಾವು ರಾಜಕೀಯವಾಗಿ ಒಂದಾಗಬೇಕಾಗಿದೆ ಎಂದು ಅವರು ಕರೆ ನೀಡಿದರು.
ಮನುವಾದಿಗಳು ಬಹುಜನ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ನಾವು ಅವರಿಗೆ ಹೆದುರವವರಲ್ಲ ಎಂದು ನಿತಿನ್ ಸಿಂಗ್ ಕಡಕ್ಕಾಗಿ ಹೇಳಿದರು.
ಬಿ ಎಸ್ ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಮಾತನಾಡಿ. ಬಹುಜನ ಸಮಾಜ ಪಾರ್ಟಿ ಸ್ವಾಭಿಮಾನದ ಸಂಘಟನೆಯಾಗಿದೆ. ಬಹುಜನ ಚಳವಳಿಯ ಮಹಾಪುರುಷರ ಆದರ್ಶಗಳನ್ನು ಹಾಗೂ ಅವರು ನಡೆಸಿದ ಚಳುವಳಿಯನ್ನು ಕಾನ್ಸಿರಾಂ ಅವರು ಮುನ್ನಡೆಸಿಕೊಂಡು ಬಂದಿದ್ದಾರೆ.ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಜನರಿಗೆ ತಿಳಿಸುವಂತಹ ಕಾರ್ಯದಲ್ಲಿ ತೊಡಗಿದೆ ಈ ದೇಶದ ಮೂಲನಿವಾಸಿಗಳಾದ ಎಸ್ಸಿ ಎಸ್ಟಿ ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ರಾಜಕೀಯ ಅಧಿಕಾರವನ್ನು ಪಡೆದು ರಾಜ್ಯವನ್ನಾಳಬೇಕಾಗಿದೆ.
ಈ ಸಮುದಾಯಗಳು ರಾಜಕೀಯವಾಗಿ ಒಂದಾದರೆ ಸಮಾನತೆ ತಾನಾಗಿಯೇ ಬರುತ್ತದೆ ಎಂದು ತಿಳಿಸಿದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೇಸ್ ಮತ್ತು ಬಿಜೆಪಿಯಾಗಲಿ ಕೊಡೊದಿಲ್ಲ ಇದು ನಿಮ್ಮ ಪಕ್ಷ ನೀವೇ ಮುಖ್ಯಮಂತ್ರಿಗಳಾಗ ಬಹುದು 2028 ಕ್ಕೆ ಬಿ ಎಸ್ ಪಿ 20 ಸ್ಥಾನವನ್ನು ಪಡೆದರೆ ಕರ್ನಾಟಕದಲ್ಲಿ ದಲಿತರೆ ಸಿ ಎಂ ಆಗಬಹುದು ಎಂದು ಅಭಿಪ್ರಾಯ ಪಟ್ಟರು.
ಬಿ ಎಸ್ ಪಿ ರಾಜ್ಯ ಉಸ್ತುವಾರಿ ಹ.ರಾ ಮಹೇಶ್ ಮಾತನಾಡಿ. ಬಹುಜನ ಸಮಾಜ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವಂತಹ ಪಕ್ಷವಾಗಿದೆ ನೀಲಿ ಬಣ್ಣ ಅಂದರೆ ಅದು ಅಂಬೇಡ್ಕರ್ ವಾದವಾಗಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು 31 ಸ್ಥಾನವನ್ನು ಪಡೆದು ಮುಖ್ಯಮಂತ್ರಿಯಾದರು ಆ ವಾತಾವರಣ ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗಬೇಕಾದರೆ ಬಿ ಎಸ್ ಪಿ ಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗಂಗಾದರ್ ಬಹುಜನ್,ಜಾಕೀರ್ ಹುಸೇನ್, ಬ ಮ ಕೃಷ್ಣಮೂರ್ತಿ, ಎನ್ ನಾಗಯ್ಯ, ಕಾಂತಪ್ಪ ಅಲಂಗಾರ್, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷ ಶಂಕರ್ ಚೇತನ್, ಯಳಂದೂರು ಬ್ಲಾಕ್ ಅಧ್ಯಕ್ಷ ಹೊನ್ನೂರು ಮಲ್ಲಿಕ್, ಕಾರ್ಯದರ್ಶಿ ಕೆಸ್ತೂರು ಶಾಂತರಾಜ್,ರವಿ ಮುಡಿಗುಂಡ, ಶಿವಶಂಕರ್,ಮಣಿ,ಶಿವಾಲಂಕರಾಯ್ಯ,ಚಿನ್ನಮಾ ಸಿದ್ದರಾಜು, ಮರಳ್ಳಿ ಬಸವರಾಜ್, ಶಿವಕುಮಾರ್, ಚಂದ್ರಕಾಂತ್, ಶಶಿಧರ್. ವಿವಿಧ ಜಿಲ್ಲೆಯ ಬಿ ಎಸ್ ಪಿ ಜಿಲ್ಲಾಧ್ಯಕ್ಷರು ಹಾಜರಿದ್ದರು.
