ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ದೇಹ ಪತ್ತೆಯಾಗಿದ್ದು,ಆಕೆಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿ ಈ ಘಟನೆ ನಡೆದಿದ್ದು,ಸಂಧ್ಯಾ (30) ಮೃತ ದುರ್ದೈವಿ.
ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ದಂಪತಿ ಪುತ್ರಿ ಸಂಧ್ಯಾ ಮೃತಪಟ್ಟ ದುರ್ದೈವಿ.
ಸರಸ್ವತಿ ಪುರಂ ಜವರೇಗೌಡ ಪಾರ್ಕ್ ಸಮೀಪ ಸಂದ್ಯಾ ಪತಿ ನಿವಾಸ ಇದೆ.
ಟೀಕೆ ಲೇಔಟ್ ನ ಮಹದೇವ್ ಅವರ ಪುತ್ರ ಅಕ್ಷಯ್ ಗೆ ಕೊಟ್ಟು ಅದ್ದೂರಿ ವಿವಾಹ ಮಾಡಲಾಗಿತ್ತು.ಪ್ರಾರಂಭದಲ್ಲಿ ಎಲ್ಲಾ ಚೆನ್ನಾಗಿತ್ತು,ಆದರೆ ಗಂಡ ಹೆಂಡತಿ ನಡುವೆ ಪದೇ ಪದೇ ಜಗಳ ಆಗುತ್ತಲೇ ಇತ್ತು ಎಂದು
ಮನೆಯವರು ತಿಳಿಸಿದ್ದಾರೆ.
ಪತಿ ಪತ್ನಿ ನಡುವೆ ಗಲಾಟೆ ಹಿನ್ನಲೆಯಲ್ಲಿ ಅಳಿಯನ ಮನೆಯವರೇ ಏನೋ ಮಾಡಿರಬೇಕು ಇದು ಕೊಲೆ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ.
ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ಕ್ರಮ ಕೈಗೊಂಡಿದ್ದಾರೆ.
