ಮೈಸೂರು: ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ತಡೆಯಬೇಕು ಮತ್ತು ಐತಿಹಾಸಿಕ ವಾಗಿ ಪ್ರಸಿದ್ಧವಾಗಿರುವ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನ ಆರ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ್ದು ಸರಿಯಲ್ಲಾ,ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿಯಾಗಿ ಮುಂದುವರಿಯಬೇಕಾಗಿತ್ತು ಎಂದು ಹೇಳಿದರು.
ನೂತನ ಮುಖ್ಯ ಮಂತ್ರಿಗಳು ಮೈಸೂರಿನ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳು ನಾಡಿಗೆ ಬರುವುದರಿಂದ ಮಾನವನೊಂದಿಗೆ ಸಂಘರ್ಷ ಹೆಚ್ಚಾಗುತ್ತದೆ.
ಅರಣ್ಯದಲ್ಲಿ ಪ್ರಾಣಿಗಳಿಗೆ ನೀರು,ಆಹಾರ ಸಿಗುವಂತೆ ಮಾಡಬೇಕು ಅವುಗಳಿಗೆ ತೊಂದರೆ ಆಗಬಾರದು ಎಂದು ವಾಟಾಳ್ ಒತ್ತಾಯಿಸಿದರು.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಮುನ್ನಾ , ಸಿಂದುವಳ್ಳೀ ಶಿವಕುಮಾರ್, ಕುಮಾರ್ ಗೌಡ, ಬಸವರಾಜು, ತ್ಯಾಗರಾಜ್ , ದರ್ಶನ ಗೌಡ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.
