ಆಫ್ರಿಕಾ: ಪಶ್ಚಿಮ ಆಫ್ರಿಕಾದ ನೈಜರ್ನ ಸಹಾರಾ ಮರುಭೂಮಿಯಲ್ಲಿ ಮನ ಕಲಕುವ ಘಟನೆ ನಡೆದಿದೆ.
ಈದ್ ಆಚರಿಸಲು ಮನೆಗೆ ಮರಳುತ್ತಿದ್ದ ನಲವತ್ತೊಂಬತ್ತು ಮಂದಿ ನೀರಿಲ್ಲದೆ ಬಾಯಾರಿಕೆಯಿಂದಾಗಿ ಮೃತಪಟ್ಟಿದ್ದಾರೆ.
ನೆತ್ತಿ ಸುಡುವ ಬಿಸಿಲ ತಾಪದ ನಡುವೆಯೇ ಮರುಭೂಮಿ ಮಧ್ಯದಲ್ಲಿ ಈ ನತದೃಷ್ಟರು ಪ್ರಯಾಣಿಸುತ್ತಿದ್ದ ಟ್ರಕ್ ಕೆಟ್ಟು ನಿಂತಿದೆ.ಬಹಳ ಸಮಯವಾದರೂ ವಾಹನ ಸರಿಹೋಗಲೆ ಇಲ್ಲ.ಅವರೆಲ್ಲ ಬಾಯಾರಿಕೆಯಿಂದ ಹಾಗೂ ಬಿಸಿಲ ತಾಪ ಸಹಿಸಲಾಗದೆ ಮೃತಪಟ್ಟಿದ್ದಾರೆ.
ಈ ದುರಂತ ಸಹಾರಾ ಮರುಭೂಮಿಯ ಅಪಾಯಕಾರಿ ರಸ್ತೆಗಳು ಮತ್ತು ಕಠಿಣ ಪರಿಸ್ಥಿತಿಗೆ ಸಾಕ್ಷಿಯಾಗಿದೆ
ಬಹಳಷ್ಟು ಮಂದಿ ತಮ್ಮ ಕುಟುಂಬದೊಂದಿಗೆ ಈದ್ ಆಚರಿಸಲು ಮಾಲಿಯಿಂದ ನೈಜರ್ಗೆ ಹಿಂತಿರುಗುತ್ತಿದ್ದರು. ಪ್ರಯಾಣದ ಸಮಯದಲ್ಲಿ, ಅವರ ಟ್ರಕ್ ಅಸ್ಮಾಕಾದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಇದ್ದಕ್ಕಿದ್ದಂತೆ ಕೆಟ್ಟುಹೋಗಿದೆ.
ಚಾಲಕ ಮತ್ತು ಅವರ ಸಹಾಯಕರು ಪ್ರಯಾಣಿಕರು ಟ್ರಕ್ ಅನ್ನು ದುರಸ್ತಿ ಮಾಡಲು ಎಸ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಅವರುಗಳ ಬಳಿಯಿದ್ದ ನೀರು ಖಾಲಿಯಾಯಿಗಿದೆ,ತೀವ್ರ ಬಿಸಿಲು ಮತ್ತು ಅತಿ ಹೆಚ್ಚಿನ ತಾಪಮಾನದಲ್ಲಿ ಸಿಲುಕಿ 49 ಮಂದಿಯೂ ಒಬ್ಬೊಬ್ಬರಾಗಿ ಸಾವನ್ನಪ್ಪಿದ್ದಾರೆ
ಆದರೆ ಅದೃಷ್ಟವಶಾತ್ ಒಬ್ಬ ವ್ಯಕ್ತಿ ಬದುಕಿದ್ದಾರೆ.ಆತ ಜೀವ ಉಳಿಸಿಕೊಳ್ಳಲು, ಬಿಸಿಲ ತಾಪದಲ್ಲೇ ಸುಮಾರು 50 ಕಿಲೋಮೀಟರ್ ಕಷ್ಟಪಟ್ಟು ನಡೆದುಕೊಂಡು ಹೋಗಿ,ನೀರಿನ ಮೂಲವನ್ನು ತಲುಪಿದ್ದಾರೆ. ನಂತರ ಅಸ್ಸಾಮಕಾ ಪಟ್ಟಣವನ್ನು ತಲುಪಿ ಈ ಭಯಾನಕ ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ, ಗವರ್ನರ್ ಜನರಲ್ ಇಬ್ರಾಹಿಂ ಬುಲಾಮಾ ಇಸಾ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿದೆ ಆದರೆ ಅಲ್ಲಿ ಮೃತ ದೇಹಗಳ ರಾಶಿ ನೋಡಿ ಹೌಹಾರಿದ್ದಾರೆ.ಕಡೆಗೆ ಏನೂ ಮಾಡಲು ಆಗದೆ ಮೃತ ದೇಹಗಳನ್ಯ ಸಾಮೂಹಿಕ ಸಮಾಧಿ ಮಾಡಿದ್ದಾರೆ.
