ಮೈಸೂರು: ಹಣದ ವಿಚಾರದಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಯುವಕ ಫಹಾದ್ ಅಹ್ಮದ್
ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಇಬ್ಬರು ಯುವಕರ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ತೌಸೀಫ್ ಹಾಗೂ ಶೈಜಾನ್.ಆ.ಶೈಯು ವಿರುದ್ದ ಪ್ರಕರಣ ದಾಖಲಾಗಿದೆ.
ಫಹಾದ್ ಅಹ್ಮದ್ ಮನೆ ಮುಂದೆ ಇದ್ದ ಟೀ ಅಂಗಡಿ ಬಳಿ ಹಣದ ವಿಚಾರದಲ್ಲಿ ತೌಸೀಫ್ ,ಶೈಯು ಹಾಗೂ ಮಹಮದ್ ಎಂಬುವರು ಜೋರು ಜಗಳವಾಡುತ್ತಿದ್ದರು.
ಜಗಳ ಬಿಡಿಸಲು ಫಹಾದ್ ಅಹ್ಮದ್ ಹೋಗಿದ್ದಾನೆ,ಈ ವೇಳೆ ತೌಸೀಫ್ ಹಾಗೂ ಶೈಯುಗೆ ಫಹಾದ್ ಅಹಮದ್ ಬುದ್ದಿ ಹೇಳಿ ಕಳಿಸಿದ್ದ.ಮಹಮದ್ ಪರ ಮಾತನಾಡಿದ ಫಹಾದ್ ಮೇಲೆ ಇಬ್ಬರೂ ಧ್ವೇಷ ಬೆಳೆಸಿಕೊಂಡಿದ್ದರು.
ಜಗಳ ಬಿಡಿಸಿದ ದಿನ ರಾತ್ರಿ ಮಾತನಾಡಬೇಕೆಂದು ಫಹಾದ್ ನನ್ನು ತೌಸೀಫ್ ಹಾಗೂ ಶೈಯು ಕರೆದೊಯ್ದಿದ್ದಾರೆ.
ಮನೆ ಬಿಟ್ಟ ಮಗ ಹಿಂದಿರುಗದ ಕಾರಣ ತಾಯಿ ಹುಡುಕಾಡಿದಾಗ ಯಾರುಬ್ ಮಸೀದಿ ಬಳಿ ಇರುವ ಅಂಗನವಾಡಿ ಕಾಂಪೌಂಡ್ ಒಳಗೆ ಫಹಾದ್ ಮೇಲೆ ಇಬ್ಬರು ಆರೋಪಿಗಳು ಮೊಚ್ಚಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಕಂಡು ಆಕೆ ಹೌಹಾರಿದ್ದಾರೆ.
ತಾಯಿ ಬಂದ ಕಾರಣ ಫಹಾದ್ ನ ಬಿಟ್ಟು ಆ ಇಬ್ಬರು ಆರೋಪಿಗಳು ಓಡಿಹೋಗಿದ್ದಾರೆ.
ತೀವ್ರ ಗಾಯಗೊಂಡ ಫಹಾದ್ ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತೌಸೀಪ್ ಹಾಗೂ ಶೈಯು ವಿರುದ್ದ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
