ಅಮೆರಿಕ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಮೆರಿಕದ ಅಯೋವಾದ ಮಸ್ಕಟೈನ್ನಲ್ಲಿ ಸೋಮವಾರ ವ್ಯಕ್ತಿಯೊಬ್ಬ ಆರು ಜನರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಕ್ರೂರ ಘಟನೆ ನಡೆದಿದೆ.
ರಯಾನ್ ವಿಲ್ಲಿಸ್ ಮೆಕ್ಫಾರ್ಲ್ಯಾಂಡ್(52) ಹೀಗೆ ನಿರ್ದಯವಾಗಿ ಹತ್ಯೆಮಾಡಿದ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇರೆ,ಬೇರೆ ಸ್ಥಳಗಳಲ್ಲಿ ಆರು ಜನರನ್ನು ಕೊಂದ ಹಂತಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
12.12 ಕ್ಕೆ ಗುಂಡಿನ ದಾಳಿಯ ಮಾಹಿತಿ ಸಿಕ್ಕಿತು.ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.ಘಟನೆ ನಡೆದ ಮನೆಯನ್ನು ಪ್ರವೇಶಿಸಿದಾಗ, ನಾಲ್ವರು ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಕೌಟುಂಬಿಕ ಸಂಬಂಧಿತ ವಿವಾದದಿಂದ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡವನ ಕುಟುಂಬ ಸದಸ್ಯರು ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ರಯಾನ್ ವಿಲ್ಲಿಸ್ ಮೆಕ್ಫರ್ಲ್ಯಾಂಡ್ ಮನೆಯಿಂದ ಪರಾರಿಯಾಗಿದ್ದ. ಬಳಿಕ ಅಧಿಕಾರಿಗಳು ಮೆಕ್ಫರ್ಲ್ಯಾಂಡ್ನನ್ನು ಸಮೀಪದ ಪಾದಚಾರಿ ಸೇತುವೆ ಬಳಿ ರಿವರ್ಫ್ರಂಟ್ ಟ್ರೇಲ್ನಲ್ಲಿ ಪತ್ತೆಹಚ್ಚಿದ್ದಾರೆ,ಆದರೆ ಆತ ಕೂಡ ಸ್ವಯಂ ಗುಂಡು ಹಾರಿಸಿಕೊಂಡಿದ್ದ ವೈದ್ಯರು ಆತ ಮೃತಪಟ್ಟಿರುವುದಾಗಿ ಪ್ರಕಡಿಸಿದ್ದಾರೆ.
ಶಂಕಿತನಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಮಸ್ಕಟೈನ್ ಪೊಲೀಸ್ ಮುಖ್ಯಸ್ಥ ಆಂಥೋನಿ ಕೀಸ್ ತಿಳಿಸಿದ್ದಾರೆ.
