ಟಿ.ನರಸೀಪುರ,ಜೂ.2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,ಭಾರತೀಯ ಕಿಸಾನ್ ಸಂಘ ಟಿ. ನರಸೀಪುರ ತಾಲೋಕು ಸಮಿತಿ ವತಿಯಿಂದ ಪಟ್ಟಣದ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಬಂದ ತಾಲೂಕು ಕಚೇರಿ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ತಾಲೂಕು ಅಧ್ಯಕ್ಷರಾದ ನಾಗಲಗೆರೆ ಶಿವಕುಮಾರ್ ಅವರು ಮಾತನಾಡಿ,ನಮ್ಮ ದಾರಿ ನಮ್ಮ ಹಕ್ಕು ಕೇಳುತ್ತಾ ಬಂದಿದ್ದೇವೆ ಆದರೆ ಈಡೇರಿಲ್ಲ ಎಂದು ಕಿಡಿಕಾರಿದರು.
ಕಳೆದ ಹಲವು ವರ್ಷಗಳಿಂದ ರೈತರ ಜಮೀನಿಗೆ ಹೋಗುವ ಸರ್ಕಾರಿ ಬಂಡಿ ದಾರಿಯನ್ನು ಅಲ್ಲಲ್ಲಿ ಒತ್ತುವರಿ ಮಾಡಿಕೊಂಡಿದ್ದು ರೈತರು ದೂರು ಕೊಟ್ಟರು ಸರಿಪಡಿಸದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬೇರೆ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಿ ರೈತರ ಜೀವನದಲ್ಲಿ ಆಟ ಆಡದೆ ಸರ್ಕಾರದ ನಿಯಮಗಳಂತೆಯೇ ಮಳೆಗಾಲಕ್ಕು ಮುನ್ನ ಕ್ರಮ ಕೈಗೊಂಡು ಸರ್ವೇ ಮಾಡಿ ರೈತರು ತಿರುಗಾಡಲು ಬಂಡಿ ದಾರಿಯನ್ನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.
ಸುಮಾರು ಹತ್ತಕ್ಕೂ ಹೆಚ್ಚು ಲಿಖಿತ ದೂರಗಳಿದ್ದು ಈ ತಿಂಗಳಲ್ಲಿ ಎಲ್ಲಾ ರಸ್ತೆಯ ಸಮಸ್ಯೆಯನ್ನು ಮುಗಿಸಿ ಕೊಡಕೊಡಬೇಕು ಮತ್ತು ತಾಲೂಕಿನಾದ್ಯಂತ ಮುಂಗಾರು ಮಳೆ ಆಗುತ್ತಿದ್ದು ಕಳೆದ ವರ್ಷ ನೀಡಿದ ಮುಸುಕಿನ ಜೋಳ ಕಳಪೆಯಿಂದ ಕೂಡಿದ್ದು, ಕಳಪೆ ಬಿತ್ತನ ಬೀಜ ಪೂರೈಸುವ ಕಂಪನಿ ಮತ್ತು ಮಾರಾಟಗಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ರೈತರಿಗೆ ಆದ ಅನ್ಯಾಯ ಈ ವರ್ಷವೂ ಆಗಬಾರದು ಹಾಗಾಗಿ ಭತ್ತ, ಕಡಲೆ, ಹೆಸರು, ಉದ್ದು ಸೇರಿದಂತೆ ರೈತರ ಬಿತ್ತನೆ ಬೀಜಗಳನ್ನು ಪರಿಶೀಲಿಸಿ ವಿತರಿಸಬೇಕು ಎಂದು ನಾಗಲಗೆರೆ ಶಿವಕುಮಾರ್ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ರವಿ ಗಂಡತೂರು ಮಾತನಾಡಿ,ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ವಿಲೇಜ್ ಅಕಾಟೆಂಟ್ ಮತ್ತು ಆರ್ ಐ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಇರಬೇಕು ಆದರೆ ಅವರು ತಮ್ಮ ನಿಶ್ಚಿತ ಸ್ಥಳದಲ್ಲಿ ರೈತರಿಗೆ ಸಿಗದೇ ಮಳೆ ಹಾನಿ ಸಂದರ್ಭಗಳಲ್ಲಿ ರೈತರ ಬೆಳೆಗಳಿಗೆ ಹಾನಿಯಾದಾಗ ರೈತರು ತಾಲೂಕು ಕಚೇರಿಗೆ ಬಂದು ಅಧಿಕಾರಿಗಳನ್ನ ಹುಡುಕುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ವೃತ್ತ ಕ್ಷೇತ್ರದಲ್ಲಿ ಕಡ್ಡಾಯವಾಗಿ ಎರಡು ದಿನಗಳ ಕಾಲ ಇರುವಂತೆ ಸೂಚಿಸಬೇಕು ಹಾಗೂ ತಾಲೂಕಿನದ್ಯಾತ ಹೊಸ ಗೊಬ್ಬರದ ಅಂಗಡಿಗಳಲ್ಲಿ ಸ್ಟಾಕ್ ಸರಿಯಾಗಿ ನಿರ್ವಹಣೆ ಮಾಡದೆ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರಗಳು ಬೇಕಾಬಿಟ್ಟಿಯಾಗಿ ಅಕ್ರಮ ದಾಸ್ತಾನು ಮಾಡಿದ ಮಾಲಿಕ ಮತ್ತು ಅಂಗಡಿ ಮಾರಾಟ ಮಾಡಿದ ಅಂಗಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ದಿನನಿತ್ಯದ ಸ್ಟಾಕ್ ಮತ್ತು ಅದರ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಅಂಗಡಿಯವರಿಗೆ ಕಡ್ಡಾಯಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿದಿನ ಕೃಷಿ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಪರಿಶೀಲಿಸಿ ತಾಲೂಕಿನದ್ಯಾತ ರಸಗೊಬ್ಬರ ಕೊರತೆ ಇಲ್ಲದಂತೆ ಮತ್ತು ದುಪ್ಪಟ್ಟು ಬೆಲೆಗೆ ಮಾರಾಟವಾಗದಂತೆ ತಡೆಯಬೇಕೆಂದು ಮನವಿ ಮಾಡಿದರು.
ಪ್ರಾಂತ ಮಹಿಳಾ ಪ್ರಮುಖರಾದ ಪುಟ್ಟಮ್ಮ ಶ್ರೀಕಂಠೇಗೌಡರು ಮಾತನಾಡಿ ರೈತರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಕಬ್ಬಿನ ದರಗಳನ್ನು ಸರ್ಕಾರ 50 ಮತ್ತು ಕಾರ್ಖಾನೆ ಐವತ್ತು ರೂಪಾಯಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಸಕ್ಕರೆ ಮಾಲೀಕರಿಗೆ ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪ್ರಾಂತ ಸದಸ್ಯರಾದ ಪ್ರಭುಸ್ವಾಮಿ ಜಿಲ್ಲಾಧ್ಯಕ್ಷರಾದ ಪ್ರಭುಸ್ವಾಮಿ,
ತಾಲೋಕು ಉಪಾಧ್ಯಕ್ಷರಾದ ಬೆನಕನಹಳ್ಳಿ ಪರಮೇಶ್, ಮಾಲಂಗಿ ಪ್ರಭುರಾಜ್, ಕಾರ್ಯದರ್ಶಿ ದೊಡ್ಡನಹುಂಡಿ ಪ್ರಭಾಕರ್ ಕೊಳತೂರು ಜ್ಯೋತಿ ರಮೇಶ್, ಬನ್ನಳ್ಳಿ ಹುಂಡಿ ಜಯಶೀಲ, ಮಂಜೇಷ್, ನಾಗರಾಜು, ಚಿಮಿಲಿ, ನಾರಾಯಣ, ಸಿದ್ದರಾಜು ಮಡವಾಡಿ ಮಹೇಶ್, ಶಶಿಕುಮಾರ್,ದರ್ಶನ್ ,ಮಹಾಂತೇಶಪ್ಪ ,ನಟರಾಜ್ ,ಕಾರು ಮಲಪ್ಪ,ರೂಪಶ್ರೀ ಯುವ ನಾಯಕರಾದ ಸಂಘದ ಸಿದ್ದರಾಜು, ಅಕ್ಕೂರು ದೊಡ್ಡಿ ಶಂಕರ ಹಲವಾರ, ಅನಿಲ್ ನಿಲಸೋಗೆ, ಸಿದ್ದರಾಜು ಚಿಕ್ಕ ಕಲ್ಕುಣಿ ಸಿದ್ದರಾಜು ನಾಗಲಗೆರೆ ಗುರುಮಲ್ಲಯ್ಯ ರಾಜಪ್ಪಾಜಿ, ಮುಕುಂದ, ಮಾರನಪುರ ರಾಜೇಂದ್ರ, ಹಲವಾರು ಗ್ರಾಮಗಳ ಗ್ರಾಮದ ಅಧ್ಯಕ್ಷರು ಸದ್ಯಸರು ಹಾಗೂ ಮುಖಂಡರು ಭಾಗವಹಿಸಿದ್ದರು.
