ಮೈಸೂರು: ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್.ಎಂ ನವೀನ್ ಕುಮಾರ್ ನೇತೃತ್ವದಲ್ಲಿ ಸಿಎಂ ಆಗಲಿರುವ ಡಿ ಕೆ ಶಿ ಪರವಾಗಿ ಸಂಭ್ರಮಾಚರಣೆ ಮಾಡಲಾಯಿತು.
ನಾಳೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ ಶಿವಕುಮಾರ್ ಅವರಿಗೆ ಜಯಕಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಅವರು, ಪಕ್ಷದ ಸಂಘಟನೆಗಾಗಿ ಡಿ.ಕೆ.ಶಿವಕುಮಾರ್ ಶ್ರಮಿಸಿದ್ದು,ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆ, ಬದ್ಧತೆ ಮತ್ತು ಪರಿಶ್ರಮಕ್ಕೆ ಸಂದಿರುವ ಈ ಗೌರವ ನಿಜಕ್ಕೂ ಸಂತಸದ ವಿಚಾರ ಎಂದು ಹೇಳಿದರು.
ಡಿಕೆಶಿ ನಾಯಕತ್ವದಲ್ಲಿ ಕರ್ನಾಟಕವು ಅಭಿವೃದ್ಧಿ ಮತ್ತು ಜನಪರ ಆಡಳಿತದ ಹೊಸ ದಿಕ್ಕಿನಲ್ಲಿ ಸಾಗಲಿ.ಸುಧೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಪರ ಬದ್ದತೆಗೆ ದೊರೆತ ಸಿಎಂ ಸ್ಥಾನ ಅಭಿನಂದನಾರ್ಹ. ಅವರ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿ, ಜನರ ಆಶೋತ್ತರಗಳಿಗೆ ಸ್ಪಂದಿಸಲಿ, ಉತ್ತಮ ಆಡಳಿತ ಇನ್ನಷ್ಟು ಬಲಗೊಳ್ಳಲಿ ಹಾಗೂ ಸಮಾಜದ ಎಲ್ಲಾ ವರ್ಗಗಳ ಪ್ರಗತಿಗೆ ಅವರ ಮಾರ್ಗದರ್ಶನ ಸಹಕಾರಿಯಾಗಿರಲಿ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಜಿ ರಾಘವೇಂದ್ರ, ದಿನೇಶ್, ಪ್ರವೀಣ್ ಕುಮಾರ್, ಪೈಲ್ವಾನ್ ಸುನಿಲ್, ಡೈರಿ ವೆಂಕಟೇಶ್,ಎಸ್.ಎನ್ ರಾಜೇಶ್, ಯೋಗೇಶ್ ಯಾದವ್, ಕೃಷ್ಣಪ್ಪ
(ಗಂಟಯ್ಯ), ಸೇವಾದಳ ಮೋಹನ್,ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಭರತ್ ಶೆಟ್ಟಿ ,ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿಕಾಂತ್,ಯುವ ಮುಖಂಡರಾದ ಶ್ರೀಧರ್ ಮತ್ತಿತರ ಅಭಿಮಾನಿಗಳು ನವೀನ್ ಕುಮಾರ್ ಜೊತೆ ಸಂಭ್ರಮಾಚರಣೆಗೆ ಸಾಥ್ ನೀಡಿದರು.
