ರಷ್ಯಾ: ರಷ್ಯಾದ ಮಾಸ್ಕೋ ಮೇಲೆ 500ಕ್ಕೂ ಹೆಚ್ಚು ಡ್ರೋನ್ಗಳಿಂದ ಉಕ್ರೇನ್ ದೊಡ್ಡ ದಾಳಿ ನಡೆಸಿದ್ದು,ಭಾರತೀಯರೊಬ್ಬರು ಸೇರಿ 4 ಮಂದಿ ಮೃತಪಟ್ಟಿದ್ದಾರೆ.
ಉಕ್ರೇನ್ 500ಕ್ಕೂ ಹೆಚ್ಚು ಡ್ರೋನ್ಗಳೊಂದಿಗೆ ರಷ್ಯಾದ ಮಾಸ್ಕೋ ಮೇಲೆ ರಾತ್ರೋರಾತ್ರಿ ಮಾರಣಾಂತಿಕ ದಾಳಿ ನಡೆಸಿದೆ.
ಈ ದಾಳಿಯು ಒಂದು ವರ್ಷದಲ್ಲೇ ಮಾಸ್ಕೋದಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ.
ಈ ವಾರದ ಆರಂಭದಲ್ಲಿ ಉಕ್ರೇನಿಯನ್ ರಾಜಧಾನಿ ಕೈವ್ ಅನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿಗಳನ್ನು ನಡೆಸಿತ್ತು, ಆ ದಾಳಿಯಲ್ಲಿ ಕನಿಷ್ಠ 25 ಜನರು ಹತ್ಯೆಯಾಗಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾದ ರಾಜಧಾನಿಯ ವಾಯುವ್ಯದಲ್ಲಿರುವ ಖಿಮ್ಕಿಯಲ್ಲಿ ಭಾನುವಾರ ರಾತ್ರಿ ಡ್ರೋನ್ ಖಾಸಗಿ ಮನೆಗೆ ಡಿಕ್ಕಿ ಹೊಡೆದಾಗ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತೊಬ್ಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ
ಎಂದು ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.
ಮಾಸ್ಕೋದಲ್ಲಿ ತೈಲ ಸಂಸ್ಕರಣಾಗಾರದ ನಿರ್ಮಾಣ ಕಾರ್ಮಿಕರು ಸೇರಿದಂತೆ ಒಟ್ಟು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ 556 ಉಕ್ರೇನಿಯನ್ ಡ್ರೋನ್ಗಳನ್ನು ತಡೆಹಿಡಿದಿದೆ ಎಂದು ಸೋಬಯಾನಿನ್ ಹೇಳಿದ್ದಾರೆ.
