ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದು ಮೈಸೂರಿನಲ್ಲಿ ಮೊದಲು ಬಿಜೆಪಿ ಶಾಸಕರೆ ಎಲೆಕ್ಟ್ರಿಕ್ ವಾಹನ ಓಡಿಸುವ ಮೂಲಕ ಇತರರಿಗೂ ಮಾರ್ಗದರ್ಶಕ ರಾಗಿದ್ದಾರೆ.
ಅದರಂತೆ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ಅವರು ತಮ್ಮ ದಿನನಿತ್ಯದ ಸಂಚಾರಿ ವಾಹನ ವ್ಯವಸ್ಥೆಯಲ್ಲಿ ಶೇಕಡ 90ರಷ್ಟು ಇಂಧನ ಬಳಕೆ ಕಡಿತಗೊಳಿಸಲು ಮುಂದಾಗಿದ್ದಾರೆ.
ಇಂದಿನಿಂದ ಎಲೆಕ್ಟ್ರಿಕ್ ಕಾರ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೂಲಕ ತಮ್ಮ ಕೆಲಸಗಳಿಗಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ.
ಕೃಷ್ಣರಾಜ ಕ್ಷೇತ್ರದ ನಾಗರೀಕರು ಸಹ ಸಮೂಹ ಸಾರಿಗೆ ಬಳಸಬೇಕೆಂದು ಶ್ರೀವತ್ಸ ಈ ವೇಳೆ ಕರೆ ನೀಡಿದರು.
