ಕೀವ್ : ಉಕ್ರೇನ್ ಮೇಲೆ ರಷ್ಯಾ ಮಂಗಳವಾರ ರಾತ್ರಿ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಿಂದಾಗಿ 27 ಮಂದಿ ಮೃತಪಟ್ಟಿದ್ದಾರೆ.
ರಷ್ಯಾ ಸೇನಾ ಪಡೆ ನಡೆಸಿದ ವೈಮಾನಿಕ ದಾಳಿಯಿಂದ ಉಕ್ರೇನ್ ಕ್ರಾಮಟೊರ್ಸ್ ನಗರದಲ್ಲಿ ಹಲವಾರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.ತಕ್ಷಣ ರಕ್ಷಣಾ ಪಡೆ ಬೆಂಕಿ ಆರಿಸಿದ್ದಾರೆ.
ರಷ್ಯಾ ದಾಳಿಯಿಂದ 27 ಮಂದಿ ಮೃತಪಟ್ಟರೆ,120 ಮಂದಿ ಗಾಯಗೊಂಡಿದ್ದಾರೆ.
ಎರಡನೇ ವಿಶ್ವಯುದ್ಧದ 81ನೇ ವಿಜಯೋತ್ಸವದ ಅಂಗವಾಗಿ ಶುಕ್ರವಾರ ಮತ್ತು ಶನಿವಾರದಂದು ಏಕಪಕ್ಷೀಯ ಕದನವಿರಾಮ ಜಾರಿಯಲ್ಲಿರಲಿದೆ ಎಂದು ರಷ್ಯಾ ಘೋಷಿಸಿತ್ತು.
ಆದ್ದರಿಂದ ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝಲೆನ್ಸ್ಕಿ ಅವರು ಸಹ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿದ್ದರು. ಕದನ ವಿರಾಮ ಉಲ್ಲಂಘಿಸಿದರೆ ಸೇನಾ ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಆದರೆ ರಷ್ಯಾದ ಸೇನಾ ಪಡೆಗಳು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ 108 ಡೋನ್ಗಳು ಮತ್ತು ಮೂರು ಕ್ಷಿಪಣಿಗಳನ್ನು ಹಾರಿಸಿವೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸಿಬಿಹಾ ಹೇಳಿದ್ದಾರೆ.
ಉಕ್ರೇನ್ ತನ್ನ ಕದನ ವಿರಾಮವನ್ನು ಪಾಲಿಸುತ್ತಿಲ್ಲ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದ ನಡುವೆ ರಷ್ಯಾದ ವಿವಿಧ ಪ್ರದೇಶಗಳು, ಕ್ರಿಮಿಯಾ ಪರ್ಯಾಯ ದ್ವೀಪ ಮತ್ತು ಕಪ್ಪು ಸಮುದ್ರದ ಮೇಲೆ ಉಕ್ರೇನ್ 53 ಡೋನ್ಗಳನ್ನು ಹಾರಿಸಿದ್ದು, ಅವುಗಳನ್ನು ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿ ಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
