(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲೂಕಿನ ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಕಾರ ಇಲಾಖೆ ಅಧಿಕಾರಿ ಹಾಗೂ ಚುನಾವಣಾಧಿಕಾರಿ ನಾಗೇಶ್ ಅವರ ನೇತೃತ್ವದಲ್ಲಿ 5 ವರ್ಷಗಳ ಅವಧಿಗೆ ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಶಿವಕುಮಾರ್ ಜಿ , ಪ.ಪಂಗಡ ಗೌರಯ್ಯ ಎಂ, ಹಿಂದುಳಿದ ವರ್ಗ ಎ. ಕಪ್ಪಡಿ ಶೆಟ್ಟಿ, ಹಿಂದುಳಿದ ವರ್ಗ ಬಿ ಶಿವಮಲ್ಲು. ಬಿ, ಮಹಿಳಾ ಸ್ಥಾನಗಳಿಗೆ ಸೌಮ್ಯ. ಹೆಚ್ ಹಾಗೂ ಕೃಷ್ಣವೇಣಿ ಆಯ್ಕೆಯಾದರೆ, ಸಾಮಾನ್ಯ ಕ್ಷೇತ್ರದಿಂದ ರವಿ. ಬಿ, ರಾಜು ನಾಯ್ಕ. ಜಿ, ರಘು. ಎಸ್, ನಂಜುಂಡಸ್ವಾಮಿ, ಹುಚ್ಚಣ್ಣ ಹಾಗೂ ಎನ್. ನಂಜುಂಡಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
12 ಸ್ಥಾನಗಳ ಪೈಕಿ ರವಿ. ಬಿ,ಹಾಗೂ ಗೌರಯ್ಯ ಎಂ ಅವರು ಕಾಂಗ್ರೆಸ್ ಬೆಂಬಲಿತ ಹಾಗೂ ಹುಚ್ಚಣ್ಣರವರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಉಳಿದ ಎಲ್ಲಾ 9 ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದಾರೆ.
ಪಾಳ್ಯ ಗ್ರಾಮ ಹಿಂದಿನಿಂದಲೂ ಲೋಕಸಭೆ ವಿಧಾನಸಭೆ ಜಿ ಪಂ ತಾ ಪಂ ಗ್ರಾ ಪಂ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಕಾಂಗ್ರೆಸ್ ಭದ್ರಕೋಟೆ. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದು ವಿಶೇಷ.
