(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಬಳಿ ಹನೂರು ಶಾಸಕ ಎಂ.ಆರ್ ಮಂಜುನಾಥ್ ಅವರು ಭಗಿರಥ ಮಹರ್ಷಿ ವೃತ್ತವನ್ನು ಅನಾವರಣ ಮಾಡಿದರು.
ಗುರುವಾರ ಸಂಜೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಗೆ ಸೇರುವ ಬೈ ಪಾಸ್ ನ ವಿಶಾಲ ವೃತ್ತದಲ್ಲಿ ವಿವಿಧ ಪಕ್ಷಗಳು, ರಾಜಕೀಯ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಭಗೀರಥ ಮಹರ್ಷಿ ನಾಮಫಲಕ ಅನಾವರಣ ಮಾಡಿ ಮಂಜುನಾಥ್ ಗ್ರಾಮಸ್ಥರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್ ನರೇಂದ್ರ, ಬಿಜೆಪಿ ಮುಖಂಡರಾದ ನಿಶಾಂತ್ ದತ್ತೇಶ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ನ ಚೇತನ್ ದೊರೆರಾಜ್, ಶಿವಕುಮಾರ್ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್, ಮುಖಂಡರಾದ ಚನ್ನಶೆಟ್ಟರು, ನಾಗೇಂದ್ರ, ಮಹದೇವಸ್ವಾಮಿ, ಮಣಿ, ಗಡಿ, ಕಟ್ಟೆ ಯಜಮಾನರು, ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.
ಬಳಿಕ ಭಗೀರಥ ಮಹರ್ಷಿ ಭಾವಚಿತ್ರವನ್ನು ಪಲ್ಲಕ್ಕಿಯ ಮೇಲೆ ಇರಿಸಿ ಗ್ರಾಮ ದೇವತೆಗಳ ಸತ್ತಿಗೆ, ಸುರೆಪಾಣಿಗಳೊಂದಿಗೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ ಗ್ರಾಮದ ಉಪ್ಪಾರ ಸಮುದಾಯದ ಬೀದಿಗಳಲ್ಲಿ ವಿಜೃಂಭಣೆಯ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು.

