ಹುಣಸೂರು: ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮದಲ್ಲಿ ಬನ್ನಂತಮ್ಮ ದೇವಿಯ 66ನೇ ವರ್ಷದ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು
ಬಂತಮ್ಮ ತಾಯಿ ಇಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ, ಈ ಹುತ್ತವು ಸುಮಾರು ಆರು ಅಡಿಗಿಂತಲೂ ಹೆಚ್ಚಾಗಿದ್ದು ಈಗಲೂ ಬೆಳೆಯುತ್ತಲೇ ಇದೆ ಎಂದು ಕರ್ನಾಟಕ ಪ್ರಜಾ ಪರ್ಟಿ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಹೇಳುತ್ತಾರೆ.
ಬೆಳಿಗ್ಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಸೀರೆ ಇಟ್ಟು ಹೂಗಳಿಂದ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂಕಾರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಊರಿನ ಹಿರಿಯರು ಮತ್ತು ಯಜಮಾನರ ನೇತೃತ್ವದಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ಊರಿನ ಜನರಿಗೆ ಸಾಮೂಹಿಕವಾಗಿ ಅನ್ನದಾನವನ್ನು ಹಮ್ಮಿಕೊಳ್ಳಲಾಯಿತು.
ಊರಿನ ಯಜಮಾನರುಗಳಾದ ಶಿವನಂಜು,ರವಿ,ಸ್ವಾಮಿ,ಸೋಮಣ್ಣ,ಕೆಂಗಣ್ಣ, ಚೆಲುವರಾಜು ಮತ್ತಿತರ ಮುಖಂಡರ ನೇತೃತ್ವದಲ್ಲಿ, ಗ್ರಾಮದ ಎಲ್ಲಾ ಜನರ ಸಹಕಾರದಲ್ಲಿ ಬನ್ನಂತಮ್ಮ ತಾಯಿಯ ಉತ್ಸವ ವೈಭವದಿಂದ ನೆರವೇರಿತು.
ಸುಮಾರು 6 ದಶಕಕಗಳಿಂದ ಈ ತಾಯಿಯ ಉತ್ಸವ ಮಾಡಿಕೊಂಡು ಬರಲಾಗಿದೆ ಎಂದು ಚಲುವಾರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
