ಮೈಸೂರು: ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂಬೈ ಲೆನ್ಸ್ಕಾರ್ಟ್ ಸಂಸ್ಥೆಯಲ್ಲಿ ಹಿಂದೂ ಉದ್ಯೋಗಿಗಳ ಧಾರ್ಮಿಕ ಆಚರಣೆಗೆ ದಕ್ಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಬೆಂಗಳೂರಿನ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣವನ್ನು ತೀವ್ರವಾಗಿ ವಿರೋಧಿಸಲಾಯಿತು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ವೇಳೆ ವಿಶ್ವ ಹಿಂದು ಪರಿಷತ್ ಮೈಸೂರು ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಅವರು ಮಾತನಾಡಿ,ಲೆನ್ಸ್ ಕಾರ್ಟ ಮುಂಬಯಿಯ ಮಳಿಗೆಯಲ್ಲಿ ಹಿಂದೂ ಮಹಿಳೆಯರಿಗೆ ಬಲವಂತವಾಗಿ ಹಣೆ ಬೊಟ್ಟು ,ತಿಲಕವನ್ನು ಹಾಕಬಾರದೆಂದು ಆದೇಶಿಸಿದ್ದದನ್ನ ಖಂಡಿಸುತ್ತೇವೆ ಎಂದು ಹೇಳಿದರು.
ಹಿಂದುಗಳ ವ್ಯಪಾರ ಬೇಕು, ಹಿಂದುಗಳು ಕೆಲಸಕ್ಕೆ ಬೇಕು ಆದರೆ ಅವರವರ ಧರ್ಮದಂತೆ ಇರಬಾರದೆನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದೇ ರೀತಿ ಹಿಂದೂ ಮಳಿಗೆಯಲ್ಲಿ ಮುಸ್ಲೀಂ ಮಹಿಳೆಯರು ಬುರ್ಖಾ ಹಾಕಿಬರಬಾರದೆಂದರೆ ಹೇಗಾಗಬಾರದು ಎಂದು ಬೇಸರ ವ್ಯಕ್ತಪಡಿಸಿ ಇಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೆಂಗಳೂರಿನ ಕೋರಮಂಗಲದ ಕ್ರಪಾನಿದಿ ಶಾಲೆ ಮತ್ತು ನಾಗಾರ್ಜುನ ಎಜುಕೇಷನ್ ಸೊಸೈಟಿಯವರು ಸಿಇಟಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳ ಜನಿವಾರ ಕತ್ತರಿಸುತ್ತೇವೆ ಎಂದಿರುವುದನ್ನ ತೀವ್ರವಾಗಿ ಖಂಡಿಸಿದರು.
ಜನಿವಾರ ಕೇವಲ ದಾರವಲ್ಲ ಅದು ಹಿಂದೂ ಸಂಪ್ರದಾಯದ ಪವಿತ್ರ ಧಾರಣೆ , ದಾರ್ಮಿಕ ಪರಂಪರೆ, ಸಂಸ್ಕ್ರತಿ ಹಾಗೂ ಗೌರವದ ಪ್ರತೀಕವಾಗಿದ್ದು ವರ್ಷಂಪೂರ್ತಿ ಅದ್ಯಯನ ಮಾಡಿ ಪರೀಕ್ಷೆ ಬರೆಯಲು ಬಂದಾಗ ಏಕಾ ಏಕಿ ಜನಿವಾರ ಕತ್ತರಿಸುತ್ತೇವೆ ಎಂದರೆ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಕುಗ್ಗಿ ಪರೀಕ್ಷೆ ಬರೆಯಲು ಕಷ್ಟವಾಗುವುದಿಲ್ಲವೆ? ವಿದ್ಯೆ ಕಲಿಸಿಕೊಡುವ ಶಾಲೆಗಳೇ ಹೀಗೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಇಂತಹ ಘಟಣೆ ಮರುಕಳಿಸುತ್ತದ್ದರೂ ಕ್ರಮ ಕೈಗೊಳ್ಳಲೇ ಇಲ್ಲ, ನಾಮಕಾವಸ್ಥೆಗೆ ಕೆಲವರನ್ನ ಅಮಾನತು ಮಾಡಿದಂತೆ ಮಾಡಿ ಮತ್ತೆ ಕೆಲಸಕ್ಕೆ ಕರೆದುಕೊಂಡರೆ ಮುಂದೆಯೂ ಇಂತಹ ಪ್ರಕರಣಗಳು ಮರುಕಳಿಸುತ್ತದೆ. ಸರ್ಕಾರ ಇಂತಹ ಸಂಸ್ಥೆಗಳ ಮೇಲೆ ಸ್ವಯಂ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.
ನಾಸಿಕ್ ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಘಟಕದಲ್ಲಿ ನಡೆದಿದೆ ಎನ್ನಲಾದ ಕಾರ್ಪೋರೇಟ್ ಜಿಹಾದ್ ಹಾಗೂ ರಾಜ್ಯದಲ್ಲಿ ವರದಿಯಾಗುತ್ತಿರುವ ಲವ್ ಜಿಹಾದ್ ಪ್ರಕರಣವನ್ನ ಮಹೇಶ್ ಕಾಮತ್ ಖಂಡಿಸಿದರು.
ದೇಶಾದ್ಯಂತ ವ್ಯವಸ್ಥಿತವಾಗಿ ಹರಡುತ್ತಿರುವ ಇಂತಹ ಜಾಲವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹಿಂದೂ ಮಹಿಳೆಯರು ಮರ್ಯಾದೆಗೆ ಅಂಜಿ ಸಾರ್ವಜನಿಕವಾಗಿ ಹೇಳಲೂ ಆಗದ ಪರಿಸ್ಥಿತಿ ಇಂದು ಎದುರಾಗಿದೆ. ಜಿಮ್ ನಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯವೂ ಕೂಡ ನಿಲ್ಲಬೇಕಿದೆ. ಮೊಬೈಲ್ ನಲ್ಲಿ ಅಶ್ಲೀಲ ಪೋಟೋ ಬಳಸಿ ಹೆದರಿಸಿ ಮರ್ಯಾದೆಗೆ ಅಂಜಿ ಜೀವನ ಪೂರ್ತಿ ಜಿಹಾದಿ ಮನೋಬಾವದರು ಹೇಳಿದ ಹಾಗೆ ಕಾಲ ತಳ್ಳುವ ಹಾಗಾಗಬಾರದು,
ದೇಶದ ಎಲ್ಲಾ ಮಹಿಳೆಯರು ದೈರ್ಯದಿಂದ ಮುಂದೆ ಬರಬೇಕು, ಮರ್ಯಾದೆಗೆ ಎಂದು ಅಂಜದೇ ತಪ್ಪಿತಸ್ಥರ ಮೇಲೆ ಕ್ರಮವಾಗುವ ತನಕ ವಿರಮಿಸದೆ ಹೋರಾಟ ಮಾಡಬೇಕು ಎಂದು ಮಹೇಶ್ ಕಾಮತ್ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ಸಹ ಕಾರ್ಯದರ್ಶಿ ಜಯಶ್ರೀ,
ಸಹಕಾರಿ ಸಂಘ ಉಪಾಧ್ಯಕ್ಷರಾದ ಅಂಬಿಕಾ, ರಾಧಾ, ಲಕ್ಷ್ಮಣ್, ಮಮತಾ, ಮಹೇಶ್,ಮಾದೇವ ಸ್ವಾಮೀಜಿ, ಚಿಕ್ಕಳ್ಳಿ ತೇಜಸ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
