ಮೈಸೂರು: ಮೈಸೂರಿನ ಗಂಗೋತ್ರಿ ಬಡ ಬಡಾವಣೆ ವಾಗ್ದೇವಿ ನಗರ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಶ್ರೀಮತಿ ಪುಟ್ಟಿರಮ್ಮ ಶ್ರವಣ ದೋಷವುಳ್ಳ ಹೆಣ್ಣು ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ವಿದ್ಯಾರ್ಥಿನಿಯರು ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇಕಡ ನೂರರಷ್ಟು ಫಲಿತಾಂಶ ತಂದುಕೊಟ್ಟಿದ್ದು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಶುಭ ಕೋರಿದ್ದಾರೆ.
ಪ್ರಥಮ ಶ್ರೇಣಿಯಲ್ಲಿ 13 ಮಂದಿ ದ್ವಿತೀಯ ಶ್ರೇಣಿಯಲ್ಲಿ ಇಬ್ಬರು ಮತ್ತು ತೃತೀಯ ಶ್ರೇಣಿಯಲ್ಲಿ ಒಬ್ಬರು ತೇರ್ಗಡೆಯಾಗಿದ್ದಾರೆ.
ಸೌಜನ್ಯ 76.70, ಶಾಹಿಮ 76.47, ನಂದಿನಿ 76.23, ಪಾರ್ವತಮ್ಮ 75.29, ಪಾವನಿ 73.4.ಪ್ರಥಮ ಶ್ರೇಣಿ.
ಅನುಷ್ಕಾ ಎನ್ 69. 60, ಹಂಷಿಕ 67. 29, ರಂಜಿತಾ 67.70, ಹೆಚ್ ಎನ್ ಭವಾನಿ 64.0 0, ಸೌಮ್ಯ 62.58, ಎನ್.ಆರ್. ನಮೃತ 57.88,ಆಫಿಷಾ ಕೌನಯ್ನ ದ್ವತೀಯ ಶ್ರೇಣಿ.55.52, ಇಂಚರ ಎನ್.ಎಲ್ 42.82 ತೃತೀಯ ಶ್ರೇಣಿ ಯಲ್ಲಿ ತೇರ್ಗಡೆಯಾಗಿದ್ದಾರೆ.
