ಹುಣಸೂರು: ಹುಣಸೂರಿನಲ್ಲಿ ಇವತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಾದಳ್ಳಿ ಬೆಟ್ಟದಲ್ಲಿ ಬಸವ ದ್ವಾರ ಉದ್ಘಾಟನೆ, ಗ್ರಾಮದೇವತೆ ಮುತ್ತುಮಾರಮ್ಮ ದೇವಾಲಯಕ್ಕೆ ಊರಿನವರು ಮಾಡಿಸಿಕೊಟ್ಟಿರುವ ಬೆಳ್ಳಿ ರಥ ಉದ್ಘಾಟನೆ,ಕನಕ ಭವನದಲ್ಲಿ ಗಣಪತಿ ದೇವಾಲಯ ಉದ್ಘಾಟನೆ,ಸಿಬಿಟಿ ಕಾಲೋನಿಯಲ್ಲಿ ಕನಕ ಸಾಂಸ್ಕೃತಿಕ ಸಮುದಾಯ ಭವನ ಉದ್ಘಾಟನೆಯನ್ನು ಸಿದ್ದರಾಮಯ್ಯ ನೆರವೇರಿಸಿದರು.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಸಿಎಂ ಮಾತನಾಡಿದರು.ಹುಣಸೂರು ಹಾಗೂ ಸುತ್ತಮುತ್ತಲಿನ ಸುಮಾರು 9 ಗ್ರಾಮಗಳ ಜನತೆ ಉಪಸ್ಥಿತರಿದ್ದರು.
