ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2026- 27ನೇ ಸಾಲಿನ ಮನೆ ಪಟ್ಟಿ ಮತ್ತು ಮನೆ ಗಣತಿಯ ಕಾರ್ಯಕ್ರಮ ಏಪ್ರಿಲ್ 1ರಿಂದ ಪ್ರಾರಂಭವಾಗಿದ್ದು ಸಾರ್ವಜನಿಕರು ಗಣತಿಯ ಅಧಿಕೃತ ಪೋರ್ಟಲ್ http://se.census.gov.In ಗೆ ಭೇಟಿ ನೀಡಿ ತಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕಿದೆ.
ಭರ್ತಿ ಮಾಡಿದ ನಂತರ ನೀವು ಸ್ವೀಕೃತಿ ಸಂದೇಶವನ್ನು ಪಡೆದುಕೋಳ್ಳಬಹುದು ಅದನ್ನು ಸುರಕ್ಷಿತವಾಗಿಟ್ಟುಕೊಂಡು ಏಪ್ರಿಲ್ 15ರ ನಂತರ ತಮ್ಮ ಮನೆಗೆ ಬರುವ ಗಣತಿದಾರರಿಗೆ ನೀಡಿದರೆ ಗಣತಿ ಕಾರ್ಯ ಸುಲಭ ಮತ್ತು ಬೇಗನೆ ಪೂರ್ಣಗೊಳ್ಳಲು ಸಹಕರಿಸಬೇಕೆಂದು ಕಡಕೊಳ ಪಟ್ಟಣ ಪಂಚಾಯತ್ ಮುಖ್ಯಾ ಧಿಕಾರಿ ಎಚ್ ಆರ್ ದೀಪ ಅವರು ಮನವಿ ಮಾಡಿದ್ದಾರೆ.
ಒಂದು ವೇಳೆ ನಿಮಗೆ ಸ್ವಯಂ ಗಣತಿ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಚಿಂತಿಸುವುದು ಬೇಡ ಖುದ್ದು ಗಣತಿದಾರರೇ ನಿಮ್ಮ ಮನೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಎಚ್ ಆರ್ ದೀಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
