ಮೈಸೂರು: ಶ್ರೀ ಭೈರವಿ ಗೌಡತಿ ಬಳಗದ ಮೂರನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮಹಿಳಾ ಅಂತಾರಾಷ್ಟ್ರೀಯ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಕೆಂಗೇರಿ ವಿಶ್ವಒಕ್ಕಲಿಗ ಮಹಾ ಸಂಸ್ಥಾನ ಮಠ ದ ಪೀಠಾಧಿಪತಿಗಳಾದ ಶ್ರೀ ನಿಶ್ಚಲಾ ನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಸನ್ಮಾನ ಮಾಡಲಾಯಿತು.
ಭೈರವಿ ಬಳಗದ ಎಲ್ಲಾ ಗೌಡತಿ ಸದಸ್ಯರು ಸಡಗರ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭೈರವಿ ಗೌಡತಿಯ ಬಳಗದ ಪ್ರೇಮ ಶಂಕರೇಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಾಜಸೇವಕರಾದ
ಗೌರಿ ಹರೀಶ್ ಗೌಡ,ಮಾಜಿ ಶಾಸಕ ಎಲ್ ನಾಗೇಂದ್ರ, ರಾಜ್ಯ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ ಗಂಗಾಧರ್, ರಾಜ್ಯ ಒಕ್ಕಲಿಗ ಸಂಘದ ಕಚಾಂಜಿ ಕೆ.ವಿ ಶ್ರೀಧರ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ ಎಂ ಬಿ ಮಂಜೇಗೌಡ, ಸಮಾಜ ಸೇವಕರಾದ ಚೇತನ್ ವಿಷಕಂಠೇಗೌಡ,ನಗರ ಪಾಲಿಕೆ ಮಾಜಿ ಸದಸ್ಯರಾದ ಭಾಗ್ಯ ಮಾದೇಶ್ ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಾದ ಜ್ಯೋತಿ ಉಮೇಶ್ ವೈದ್ಯಕೀಯ ಕ್ಷೇತ್ರ,ಅನಿತಾ ನಾರಾಯಣ್ ಕೃಷಿ ಕ್ಷೇತ್ರ, ಸಾಹಿತ್ಯ ಕ್ಷೇತ್ರ ರಶ್ಮಿ ವಿಶ್ವನಾಥ್, ಶಿಕ್ಷಣ ಕ್ಷೇತ್ರ ಆಶಾ ದೇವರಾಜ್, ಪರಿಮಳ ಮಂಜುನಾಥ್ ಉದ್ಯಮ ಕ್ಷೇತ್ರ ಇವರುಗಳಿಗೆ ಶ್ರೀ ನಿಶ್ಚಲಾ ನಂದ ಸ್ವಾಮೀಜಿಯರ ದಿವ್ಯ ಸಾನಿಧ್ಯದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಭೈರವಿ ಬಳಗದ ಪ್ರಧಾನ ಕಾರ್ಯದರ್ಶಿ ರೇಣುಕಾ ಜಗದೀಶ್, ನಿರ್ದೇಶಕರಾದ ರಾಜೇಶ್ವರಿ ನಾಗರಾಜ್, ಗಾಯತ್ರಿ ಜಗದೀಶ್, ನಾಗಮಣಿ ಸುಬ್ರಮಣ್ಯ, ಸವಿತ ಗೋವಿಂದೇಗೌಡ, ಕಲಾವತಿ, ರಾಧಾ ಜಯರಾಮ್ ಉಪಸ್ಥಿತರಿದ್ದರು.
