ಮೈಸೂರು: ಪ್ರತಿಷ್ಠಿತ ವೈದ್ಯಕೀಯ ನಾರಾಯಣ ಹೆಲ್ತ್ ಸಂಸ್ಥೆಯು ಇದೀಗ ಮೈಸೂರಿನಲ್ಲಿ ಅತ್ಯಾಧುನಿಕ 3ಡಿ-ಗೈಡೆಡ್ ಏಟ್ರಿಯಲ್ ಫಿಬ್ರಿಲೇಷನ್ ಅಬ್ಲೇಶನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪರಿಚಯಿಸುವ,ಮೂಲಕ ಪ್ರಾದೇಶಿಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ.
ಈ ಅತ್ಯಾಧುನಿಕ ಚಿಕಿತ್ಸೆ ಒದಗಿಸುವ ಮೂಲಕ ಮೈಸೂರು ಮತ್ತು ಸುತ್ತಮುತ್ತಲ ಭಾಗದ ರೋಗಿಗಳಿಗೆ ಉತ್ಕೃಷ್ಟ ಹೃದಯ ಚಿಕಿತ್ಸೆಯನ್ನು ಅತ್ಯಂತ ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ.
಼
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮೈಸೂರಿನ ನಾರಾಯಣ ಹೆಲ್ತ್ ನ ಡಾ. ಅಭಿನವ್ ಭೈರವನಾಥ್ ಪಾಂಡೆ ಆನಂದ್ ಮಾತನಾಡಿ,ವಿಶ್ವಾದ್ಯಂತ ಕಂಡುಬರುವ ಅತ್ಯಂತ ಸಾಮಾನ್ಯ ಹೃದಯದ ಲಯದ ಸಮಸ್ಯೆಗಳಲ್ಲಿ ಒಂದಾದ ‘ಏಟ್ರಿಯಲ್ ಫಿಬ್ರಿಲೇಷನ್’, ಸಾಮಾನ್ಯವಾಗಿ ಅನಿಯಮಿತ ಹೃದಯ ಬಡಿತ, ಉಸಿರಾಟದ ತೊಂದರೆ ಮತ್ತು ಸುಸ್ತಿನ ರೂಪದಲ್ಲಿ ಕಂಡುಬರುತ್ತದೆ ಎಂದು ತಿಳಿಸಿದರು.
ಗಂಭೀರ ಪ್ರಕರಣಗಳಲ್ಲಿ ಈ ಸಮಸ್ಯೆಯು ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು, ಇತ್ತೀಚಿನವರೆಗೂ, ಇಂತಹ ಉನ್ನತ ಮಟ್ಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಮೈಸೂರಿನ ರೋಗಿಗಳು ಬೆಂಗಳೂರು, ಚೆನ್ನೈ ಅಥವಾ ಹೈದರಾಬಾದ್ನಂತಹ ಮಹಾನಗರಗಳಿಗೆ ಹೋಗಬೇಕಾಗಿತ್ತು. ಆದರೆ ಈಗ ಈ ಚಿಕಿತ್ಸೆ ಮೈಸೂರಿನಲ್ಲಿಯೇ ಲಭ್ಯವಾಗುತ್ತಿರುವುದು ವಿಶೇಷ ಎಂದು ಹೇಳಿದರು.
ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಾಧುನಿಕ ತ್ರಿಡಿ ಎಲೆಕ್ಟ್ರೋ-ಅನಾಟಮಿಕಲ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿ ನಡೆಸಲಾಗಿದ್ದು, ಈ ತಂತ್ರಜ್ಞಾನವು ವೈದ್ಯರಿಗೆ ಅನಿಯಮಿತ ಹೃದಯ ಬಡಿತದ ಮೂಲವನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಈ ಪ್ರಕರಣದಲ್ಲಿ ರೋಗಿಯು ಹೃದಯ ಬಡಿತದ ಏರುಪೇರಿನಿಂದಾಗಿ ಪದೇ ಪದೇ ತಲೆಸುತ್ತು ಮತ್ತು ಮೂರ್ಛೆ ಹೋಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ವಿವರವಾಗಿ ತಪಾಸಣೆ ಮಾಡಿದ ನಂತರ ಈ ಚಿಕಿತ್ಸೆಗೆ ಒಳಪಡಿಸಲಾಯಿತು ಮತ್ತು ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು.
ಅಬ್ಲೇಶನ್ ಚಿಕಿತ್ಸೆಯ ಒಂದು ವಾರದ ನಂತರ ನಡೆಸಿದ ‘ಹೋಲ್ಟರ್ ಮಾನಿಟರಿಂಗ್’ ಪರೀಕ್ಷೆಯಲ್ಲಿ ಅನಿಯಮಿತ ಹೃದಯ ಬಡಿತದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಲಕ್ಷಣಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಉತ್ತಮ ಫಲಿತಾಂಶದ ಹೊರತಾಗಿ ಈ ಬೆಳವಣಿಗೆಯು ಕೇವಲ ವೈದ್ಯಕೀಯ ಯಶಸ್ಸು ಮಾತ್ರವಲ್ಲದೆ, ರೋಗಿಗಳು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಅಲೆಯುವುದನ್ನು ತಪ್ಪಿಸಲಿದೆ ಎಂದು ತಿಳಿಸಿದರು.
ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಲು, ನಿರಂತರವಾಗಿ ವೈದ್ಯಕೀಯ ತಪಾಸಣೆ ನಡೆಸಲು ಮತ್ತು ಒಟ್ಟಾರೆ ಚಿಕಿತ್ಸಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ.
ಈ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ಮೈಸೂರಿನಲ್ಲಿ ತನ್ನ ‘ಅರಿತ್ಮಿಯಾ’ (ಹೃದಯ ಬಡಿತದ ಏರುಪೇರು) ಚಿಕಿತ್ಸಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.
ಮುಂಬರುವ ದಿನಗಳಲ್ಲಿ ಏಟ್ರಿಯಲ್ ಫಿಬ್ರಿಲೇಷನ್, ಸಂಕೀರ್ಣ ಸುಪ್ರಾವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ, ವೆಂಟ್ರಿಕ್ಯುಲರ್ ಅರಿತ್ಮಿಯಾ ಮತ್ತು ಸುಧಾರಿತ ಕಾರ್ಡಿಯಾಕ್ ಡಿವೈಸ್ ಥೆರಪಿಗಳಂತಹ ಉನ್ನತ ಶ್ರೇಣಿಯ ಚಿಕಿತ್ಸೆಗಳನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಕೇಶವ ಮೂರ್ತಿ, ಹಿರಿಯ ಹೃದ್ರೋಗ ತಜ್ಞರು ಡಾ. ಅಶೋಕ.ಎ, ತುರ್ತು ಚಿಕಿತ್ಸಾ ತಜ್ಞರು ಹಾಗೂ ವೈದ್ಯಕೀಯ ಅಧೀಕ್ಷಕರು, ನಾರಾಯಣ ಆಸ್ಪತ್ರೆ, ಮೈಸೂರು ಭಾಗವಹಿಸಿದ್ದರು.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಸಂಪರ್ಕಿಸಬಹುದು.
https://www.narayanahealth.org
