ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಆರ್ಟ್ ಆಫ್ ಲಿವಿಂಗ್ ನಲ್ಲಿ
1000 ವರ್ಷಗಳಷ್ಟು ಹಳೆಯದಾದ ಮೂಲ ಸೋಮನಾಥ ಜ್ಯೋತಿರ್ಲಿಂಗಕ್ಕೆ ಮಹಾರುದ್ರ ಪೂಜೆ ನೆರವೇರಿಸಲಾಯಿತು.
ಆರ್ಟ್ ಆಫ್ ಲಿವಿಂಗ್ ಆಫ್ ಮೈಸೂರು 45ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ 1000 ವರ್ಷಗಳಷ್ಟು ಹಳೆಯದಾದ ಮೂಲ ಸೋಮನಾಥ ಜ್ಯೋತಿರ್ಲಿಂಗಕ್ಕೆ ಮಹಾರುದ್ರ ಪೂಜೆಯನ್ನು ನೆರವೇರಿಸಲಾಯಿತು.
ನೂರಾರು ಭಕ್ತರು ಜ್ಯೋತಿರ್ಲಿಂಗ ದರ್ಶನ ಪಡೆದರು. ಆನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಿವ್ಯ ಪಾದ ಸ್ವಾಮೀಜಿ, ಅಪೂರ್ವ ಸುರೇಶ್, ರವಿಕುಮಾರ್, ವಾಸುದೇವ್ ನಾಯಕ್, ಗೋಕುಲಮ್, ಶಬರಿನಾಥ, ರೇಣದಿಲೀಪ್, ಗೌತಮ್, ಗಾಯಿತ್ರಿ, ಶೇಖರ್ ಹಾಗೂ ಆಶ್ರಮದ ಭಕ್ತರು ಹಾಜರಿದ್ದರು.
