ಯಾದಗಿರಿ: ಸಾಮಾನ್ಯವಾಗಿ ನದಿ, ದೊಡ್ಡ ಕೆರೆ ಯಲ್ಲಿ ಮೊಸಳೆಗಳು ಇರುವುದು ಸರ್ವೇಸಾಮಾನ್ಯ.ಆದರೆ ಯಾದಗಿರಿಯಲ್ಲಿ ಬೃಹತ್ ಗಾತ್ರದ ಮೊಸಳೆ ಭತ್ತದ ಗದ್ದೆಗೂ ಎಂಟ್ರಿ ಕೊಟ್ಟಿದ್ದ ಜನತೆ ಹೌಹಾರಿ ಹೋಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಏಕಾಏಕಿ ಭತ್ತದ
ಜಮೀನಿಗೆ ನುಗ್ಗಿದ ಮೊಸಳೆ ಕಂಡುಬಂದಿದೆ.
ವಿಷಯ ಹರಡುತ್ತಿದ್ದಂತೆ ಇಡೀ ಗ್ರಾಮದ ಜನತೆ ಮೊಸಳೆ ನೋಡಲು ದೌಡಾಯಿಸಿದ್ದಾರೆ.
ಸಾಬಮ್ಮ- ತಿಪ್ಪಣ್ಣ ಬೈಚಬಲ್ ಅವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.
ಭತ್ತದ ಬೆಳೆಗೆ ಮಾಡಿರುವ ಪುಟ್ಟ ಬದುಗಳ ಮಧ್ಯೆ, ಮೊಸಳೆ ಆರಾಮಾಮವಾಗಿ ಸಂಚರಿಸಿದೆ.
ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು.
ಒ
ಕಡೆಗೆ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬಂದಿ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
