ಮೈಸೂರು: 900 ಕೋಟಿ ರೂ ಆಸ್ತಿಯನ್ನು ಸರಕಾರಕ್ಕೆ ಉಳಿಸಿಕೊಟ್ಟ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರನ್ನು ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಮೈಸೂರಿನ ಕೆ ಸಿ ಬಡಾವಣೆ ವ್ಯಾಪ್ತಿಯಲ್ಲಿ 3 ಎಕರೆ ಕೆರೆ ಜಾಗ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿದ ಜಾಗವನ್ನು ತೆರವುಗೊಳಿಸಲು ಮತ್ತು ಕುರುಬರಹಳ್ಳಿ ಸರ್ವೆ ನಂಬರ್ 4ರ ವ್ಯಾಪ್ತಿಯ 24.10 ಎಕರೆ ಭೂ ಹಗರಣ ಬಯಲು ಮಾಡಿ 24 ಗಂಟೆ ಯೊಳಗೆ ಸೆಲ್ ಅಗ್ರಿಮೆಂಟ್ ರದ್ದು ಮಾಡಿಸಿ 900 ಕೋಟಿ ರೂ ಆಸ್ತಿಯನ್ನು ಸರಕಾರಕ್ಕೆ ಉಳಿಸಿಕೊಟ್ಟ ಹಿನ್ನೆಲೆಯಲ್ಲಿ ಶ್ರೀವತ್ಸ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಸುಬ್ಬಯ್ಯ,ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವಸಂತ ಮನೀಶ್, ಟೆನಿಸ್ ಗೋಪಿ, ಮನೋಜ್, ಜಗದೀಶ್, ರವಿ,ನಾಣಿ ಗೌಡ, ಮಲ್ಲಿಕಾರ್ಜುನ್, ಮಹೇಶ್, ಸುರೇಶ್, ಪ್ರಕಾಶ್, ಕಾರ್ತಿಕ್, ಕಿಶೋರ್, ಲಕ್ಷ್ಮೀಶ, ಅಭಿಲಾಶ್ ಮುಂತಾದವರು ಹಾಜರಿದ್ದರು.
