ಮೈಸೂರು: ಮೈಸೂರಿನ ಯರಗನಹಳ್ಳಿ ಸಮೀಪವಿರುವ ಕಾವೇರಿ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ರೋಗಿಗಳು ಹಾಗೂ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸುತ್ತಿದ್ದು ರೋಗಿಗಳು ಹಾಗೂ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾಂಟೀನ್ ಗುತ್ತಿಗೆ ಪಡೆದು ನಡೆಸುತ್ತಿರುವ ವ್ಯಕ್ತಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ರೋಗಿಯೊಬ್ಬರು ತಡರಾತ್ರಿ ಚಪಾತಿ ಹಾಗೂ ರೈಸ್ ಆರ್ಡರ್ ಮಾಡಿದ್ದು ಎರಡೂ ಆಹಾರಗಳು ಕೂಡ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿತ್ತು, ಚಪಾತಿ ಹಿಟ್ಟಿನಂತೆ ಇತ್ತು ಚಪಾತಿಯನ್ನ ಬೇಯಿಸಿರಲಿಲ್ಲ ಎಂದು ದೂರಿದ್ದಾರೆ.
ಮತ್ತೆ ಫ್ರೂಟ್ಸ್ ಆರ್ಡರ್ ಮಾಡಿದರು ಸಹ ಫ್ರೂಟ್ಸ್ ಮೇಲ್ಗಡೆ ಎಲ್ಲ ಚೆನ್ನಾಗಿರುವ ಹಣ್ಣುಗಳನ್ನು ಇಟ್ಟು ಒಳಗಡೆ ಕೊಳೆತ ಹಣ್ಣುಗಳೊಂದಿಗೆ ನೀಡಲಾಗಿದೆ ಇದಕ್ಕೆ 60 ರೂಪಾಯಿ ಶುಲ್ಕ ವಿಧಿಸಲಾಗಿದೆ ಹೀಗೆ ಮುಂದುವರೆದರೆ ರೋಗಿಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಆಡಳಿತಾಧಿಕಾರಿಗಳು ತಕ್ಷಣ ಈಗ ಇರುವ ಗುತ್ತಿಗೆಯನ್ನು ರದ್ದುಪಡಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರಿಗೆ ರೋಗಿಗಳು ಮತ್ತು ಮನೆಯವರು ಮನವಿ ಮಾಡಿದ್ದಾರೆ.
