
ಹುಣಸೂರು: ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಬೆಂಗಳೂರು ಮತ್ತು ಹುಣಸೂರು ಶಾಖೆ ವತಿಯಿಂದ ಸೋಮವಾರ ಹುಣಸೂರಿನ ನಗರಸಭೆ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಹಿಳಾ ದಿನಾಚರಣೆಯ ಎಲ್ಲಾ ಕಾರ್ಯಕ್ರಮಗಳು ಹುಣಸೂರು ನಗರಸಭೆ ಆಯುಕ್ತರೂ ಸಂಘದ ಗೌರವಾಧ್ಯಕ್ಷರೂ ಆದ ಮಾನಸ ಅವರ ಮುಂದಾಳತ್ವ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶೈಲಾ ಕೆ.ಡಿ ಅವರ ನೆರವಿನಲ್ಲಿ ಅಚ್ಚುಕಟ್ಟಾಗಿ ನಡೆಯಿತು.
ಕಾರ್ಯಕ್ರಮದ ವೇಳೆ ಪೌರ ಸೇವಾ ಕಾರ್ಮಿಕರು ತಮ್ಮ ಹಲವಾರು ಸಮಸ್ಯೆಗಳನ್ನು ಮಾನಸ ಅವರಲ್ಲಿ ತೊಡಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು ಸಾಧ್ಯವಾದಷ್ಟು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಪೌರ ಸೇವಾ ನೌಕರರು ಮಹಿಳಾ ನೌಕರರನ್ನು ಸನ್ಮಾನಿಸಿ ಮಾನಸ ಅವರು ಗೌರವಿಸಿದರು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಇತರೆ ಪದಾಧಿಕಾರಿಗಳು ಸಹಕಾರ ನೀಡಿದರು ಜೊತೆಗೆ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಸಿದ್ದರಾಜು, ಸಂಘದ ಜಿಲ್ಲಾಧ್ಯಕ್ಷರು ರಾಚಯ್ಯ, ನಗರಸಭೆ ಮಹಿಳಾ ಸಿಬ್ಬಂದಿಗಳು, ಪದಾಧಿಕಾರಿಗಳು,ಹೆಲ್ತ್ ಇನ್ಸ್ಪೆಕ್ಟರ್ ಶಶಿಕುಮಾರ್, ಸಂಘದ ಉಪಾಧ್ಯಕ್ಷ ಚಂದ್ರು, ಕಾರ್ಯದರ್ಶಿ ನಾಗರಾಜು, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ, ಪದಾಧಿಕಾರಿಗಳಾದ ಮಂಜುಳಾ, ಪ್ರೇಮ, ಜ್ಯೋತಿ, ನಾಗಮ್ಮ, ಶೋಭಾ, ಲಕ್ಷ್ಮಿ, ಸುಶೀಲ ಸೇರಿದಂತೆ ಸ್ಥಳೀಯ ಮುಖಂಡರು ಸಾರ್ವಜನಿಕರು ಮಹಿಳೆಯರು ಪಾಲ್ಗೊಂಡಿದ್ದರು.
