ಇಸ್ರೇಲ್: ಇಸ್ರೇಲ್, ಅಮೆರಿಕ ದಾಳಿಯಿಂದ ಪರಮೋಚ್ಚ ನಾಯಕ ಕಳೆದುಕೊಂಡ ಇರಾನ್, ಈಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ.
ಇರಾನ್ನ ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದು, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಲಾಗಿದೆ.
ಕಳೆದ ವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಯತೊಲ್ಲ ಅಲಿ ಖಮೇನಿ ಮೃತರಾಗಿದ್ದರು.
88 ಸದಸ್ಯರನ್ನೊಳಗೊಂಡ ಧರ್ಮಗುರುಗಳ ಮಂಡಳಿಯು ಮೊಜ್ತಬಾ ಅವರ ಪರವಾಗಿ ಬಹುಮತದ ತೀರ್ಪು ನೀಡಿದೆ.
ಮೊಜ್ತಬಾ ಅವರ ನೇಮಕಾತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಅನುಮೋದನೆ ಇಲ್ಲದೆ ಅವರು ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದ್ದು, ಈವರೆಗೆ ಸುಮಾರು 1,332 ಇರಾನ್ ನಾಗರಿಕರು ಬಲಿಯಾಗಿದ್ದಾರೆ.
ಇರಾನ್ನ ತೈಲ ಘಟಕಗಳ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸುತ್ತಲೇ ಇದೆ,ಆದರೂ ಇರಾನ್ ಶರಣಾಗುವುದಿಲ್ಲ ಆಕ್ರಮಣಕಾರರಿಗೆ ತಕ್ಕ ಶಿಕ್ಷೆ ನೀಡುತ್ತೇವೆ ಎಂದು ಕಠಿಣವಾಗಿ ಎಚ್ಚರಿಸಿದೆ.
