ಮೈಸೂರು: ಸಮಸ್ತ ಸೃಷ್ಟಿಯ ಮೂಲ ಹೆಣ್ಣು.ಹೆಣ್ಣು ಸಂಸಾರದ ಕಣ್ಣು ಎಂಬ ನಾಣ್ಣುಡಿಯಂತೆ ಪ್ರತಿ ಕುಟುಂಬದಲ್ಲೂ ಹೆಣ್ಣಿನ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಸಮಾಜ ಸೇವಕಿ ವಿದ್ಯಾ ಅವರು ತಿಳಿಸಿದರು.
ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿರುವ ಸುಬ್ಬಣ್ಣ ಹಾಸ್ಟೆಲ್ ವಿದ್ಯಾರ್ಥಿ ಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ವಿತರಿಸಿದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಯಿಯಾಗಿ, ಮಡದಿಯಾಗಿ, ಮಗಳಾಗಿ ಸಹೋದರಿಯಾಗಿ ಸ್ನೇಹಿತೆಯಾಗಿ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವ ಈ ಹೆಣ್ಣಿನ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಂದು ಅವರು ತಿಳಿಸಿದರು.
ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ ಕೂಡ ಪೋಷಕರಿಗೆ ಇರುತ್ತದೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ವಿದ್ಯಾ ವಿವರಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಅವರು ಮಾತನಾಡಿ, ಪ್ರತಿಯೊಬ್ಬ ಗಂಡಿನ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಚೈತನ್ಯ ತುಂಬುವ ಸ್ತ್ರೀ ಬಗ್ಗೆ ಎಷ್ಟು ಹೇಳಿದರು ಸಾಲದು ಪ್ರತಿ ಗಂಡಿನ ಜೀವನ ಬೆಳಗುವವಳೆ ಹೆಣ್ಣು ಎಂದು ಬಣ್ಣಿಸಿದರು.
ಎಲ್ಲದಕ್ಕೂ ಮಿಗಿಲಾಗಿ ನಮಗೆ ಜನ್ಮ ಕೊಟ್ಟವಳು ಹೆಣ್ಣು ಅವರಿಂದ ಸಿಗುವ ಸಣ್ಣ ಪುಟ್ಟ ಸಂತೋಷವೇ ಬದುಕಿಗೆ ಬಹುದೊಡ್ಡ ಸ್ಪೂರ್ತಿಯಾಗಿರುತ್ತದೆ ಅವುಗಳ ಮೇಲೆ ನಂಬಿಕೆ ಇರಲಿ ಎಂದು ಹೇಳಿದರು.
ತಂದೆ ತಾಯಿ ಶಿಕ್ಷಕರನ್ನು ಗೌರವಿಸಬೇಕು. ಚೆನ್ನಾಗಿ ಓದಿ ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ನೋಡಿಕೊಳ್ಳುವುದರ ಜೊತೆಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯನ್ನ ಮಾಡುವ ಮೂಲಕ ಆಶ್ರಯ ನೀಡಿರುವ ಸುಬ್ಬಣ್ಣ ಹಾಸ್ಟಲ್ ಹಾಗೂ ತಮ್ಮ ಪೋಷಕರಿಗೆ ಒಳ್ಳೆಯ ಹೆಸರನ್ನು ತರುವಂತವರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಗಂಧದಗುಡಿ ಆರ್ಯನ್, ಚಂದನ್, ಬಾಲಾಜಿ, ಸಿಂಚನಗೌಡ, ಹಿರಿಯ ಕ್ರೀಡಾಪಟು ಮಹದೇವ್ , ಛಾಯಾ, ಗಾಯಕ ಯಶ್ವಂತ್ ಕುಮಾರ್, ಕ್ರೀಡಾ ತರಬೇತಿದಾರ ಜಗದೀಶ್, ಅಮಿತ್,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ದತ್ತ, ಮತ್ತಿತರರು ಹಾಜರಿದ್ದರು.
ಈ ಮೂಲಕ ಸೇವಾ ಕಾರ್ಯದೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರ ಜೀವನದ ಯಶಸ್ಸಿನ ಹಿಂದೆ ಹೆಣ್ಣಿನ ಬಹುದೊಡ್ಡ ಪಾತ್ರದ ಬಗ್ಗೆ ತಿಳಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಸ್ನೇಹ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
