ಮೈಸೂರು: ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ರೇಣುಕಾಚಾರ್ಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.
ಗುರು ರೇಣುಕಾಚಾರ್ಯ ಸ್ವಾಮಿಗೆ ಅಭಿಷೇಕ ಪೂಜೆ ಕಾರ್ಯಗಳು ಶಿವಾರ್ಚಕರಾದ ವೇದಮೂರ್ತಿ ಮತ್ತಿತರರ ನೇತೃತ್ವದಲ್ಲಿ ನೆರವೇರಿತು.
ಪೂಜಾ ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಪ್ರಭಾರ ಜಿಲ್ಲಾಧಿಕಾರಿಗಳಾದ ಶಿವರಾಜ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್,ಗಿರೀಶ್ ,ಮೋಹನ್ ,ಕಂಡೇಶ್ ,ಮಾಲಿನಿ ಪಾಲಾಕ್ಷ ,ಭಾನು ಮೋಹನ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.
