ಮೈಸೂರು: ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ಮೈಸೂರಿನ ಜಲ ದರ್ಶನಿಯಲ್ಲಿ ರಾಜ್ಯ ಅಧ್ಯಕ್ಷರಾದ ಕೆ.ಸಿ ಪುಟ್ಟ ಸದಾಶಟ್ಟಿ ಮತ್ತು ಕಾರ್ಯದರ್ಶಿ ವರ್ಕ ಶೆಟ್ಟಿಯವರ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಸರ್ವ ಜನಾಂಗದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧ್ಯಕ್ಷರು,ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ವರಿಗೂ ಸಹ ಬಾಳು ಎಂಬಂತೆ ಬಜೆಟಿನಲ್ಲಿ ಕಾಯಕ ಸಮಾಜಕ್ಕೆ ಹೆಚ್ಚು ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಜಾಗೃತಿ ವೇದಿಕೆ ಕುಂಬಾರರ ಸಂಘದ ಅಧ್ಯಕ್ಷರಾದ ಮುಳ್ಳೂರು ಮಹೇಶ್,ಯಶವಂತ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೊಣಸೂರ್ ಶಿವರಾಜ್, ಕಾರ್ಯದರ್ಶಿ ಬೋರಪ್ಪ ಶೆಟ್ಟಿ,
ಕಾಯಕ ಸಮಾಜದ ಪಿರಿಯಾಪಟ್ಟಣ ತಾಲೂಕಿನ ಸಂಘಟನಾ ಕಾರ್ಯದರ್ಶಿ ಮಕೋಡು ಬಸವರಾಜ್, ಟಿ ನರಸೀಪುರದ ಲೋಕೇಶ್ ಆಚಾರ್, ರಮೇಶ್ ಗಾಣಿಗ, ಮಾದೇವ್ ಯಾದವ್, ನಾಡಪ್ಪನಹಳ್ಳಿ ನಾಗರಾಜ್, ಕೆಂಪು ಶೆಟ್ಟಿ, ತಿಮ್ಮ ಶೆಟ್ಟಿ, ಸೋಮಶೇಖರ್, ಮತ್ತಿತರ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
