ಪಿರಿಯಾಪಟ್ಟಣ: ಪರಿಯಾಪಟ್ಟಣ ತಾಲೂಕಿನ ರೈತ ಸಂಘ ಮತ್ತು ಹಸಿರು ಸೇನೆಯ ಮಹಿಳಾ ಘಟಕದ ಅಧ್ಯಕ್ಷರಾದ ಕಾವೇರಮ್ಮ ನವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಪಿರಿಯಾಪಟ್ಟಣ ವತಿಯಿಂದ ಕೃಷಿ ರತ್ನ ಪ್ರಶಸ್ತಿಯನ್ನು ವಿತ್ತರಿಸಲಾಯಿತು.
ನೂತನ ಶಾಖೆ ಉದ್ಘಾಟನೆ
ಸಂದರ್ಭದಲ್ಲಿ ಕಾವೇರಮ್ಮ ನವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಶ್ರಯ ಯೋಜನೆಯ ಅಧ್ಯಕ್ಷರಾದ ನಿತಿನ್ ವೆಂಕಟೇಶ್,ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ವಿಜಯಕುಮಾರ್, ನೂತನ ಶಾಖೆಯ ಅಧ್ಯಕ್ಷರಾದ ಹಿಂದುಸ್ತಾನಿ ಅರುಣ್, ರೈತ ಸಂಘದ ಹಸಿರು ಸೇನೆ ರಾಜ್ಯ ಸದಸ್ಯ ಸೋಮೇಗೌಡರು, ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೊಣಸೂರು ಶಿವರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ರಂಜಿತ, ಪ್ರಭು ಮತ್ತಿತರರು ಹಾಜರಿದ್ದರು.
