ಮೈಸೂರು: ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ತಿನ ಕರ್ನಾಟಕ ರಾಜ್ಯದಕ್ಷರಾದ ಎನ್.ಎಂ.ನವೀನ್ ಕುಮಾರ್ ಅವರಿಗೆ ಮಂತ್ರಾಲಯದ ಶ್ರೀ ಸುಭುದೇಂದ್ರತೀರ್ಥರು ಹಾಗೂ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಷ ಶ್ರೀಪಾದಂಗಳ್ ಸ್ವಾಮಿಗಳು ಆಶೀರ್ವಾದಿಸಿ ಸನ್ಮಾನಿಸಿದರು.
ಮೈಸೂರು ಜಿಲ್ಲೆ, ಟಿ.ನರಸೀಪುರದ ಶ್ರೀ ವ್ಯಾಸರಾಜಮಠ (ಸೋಸಲೆ)ದಲ್ಲಿ ಶುಕ್ರವಾರ ನಡೆದ ಶ್ರೀಶೇಷ ಚಂದ್ರಿಕಾಚಾರ್ಯರ ಮೂಲ ಬೃಂದಾವನದ ಸನ್ನಿಧಿಯ ನೂತನ ಭವನದ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಿಯಾದ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಆದ ಅಖಿಲ ಭಾರತೀಯ ಬ್ರಾಹ್ಮಣ ಏಕೀಕೃತ ಪರಿಷತ್ತಿನ ಕರ್ನಾಟಕ ರಾಜ್ಯದಕ್ಷರಾದ ಎನ್.ಎಂ.ನವೀನ್ ಕುಮಾರ್ ಅವರಿಗೆ ಸ್ವಾಮೀಜಿ ಯವರುಗಳು ಆಶೀರ್ವದಿಸಿದರು.
