ಇಂಡಿ: ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾದರೆ ಅದನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವುದು ಹೆಣ್ಣು ಮಕ್ಕಳು ಎಂದು
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ ತಿಳಿಸಿದರು.
ಇಂಡಿಯ ಸಂತೂ ಶಾಂತಿಶ್ವರ ಮಂಗಳ ಕಾರ್ಯಾಲಯದಲ್ಲಿ ಸಂಬಾಳ ಬಾರಿಸುವ ಮೂಲಕ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದದಲ್ಲಿ ಸಂಸ್ಕೃತಿ,ಸಂಸ್ಕಾರ, ಜೀವನದ ಮೌಲ್ಯಗಳು ಅಡಗಿದೆ, ದಶಮಾನೋತ್ಸವದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕುಗಳಲ್ಲಿ ಮಹಿಳಾ ಘಟಕಗಳನ್ನು ಪ್ರಾರಂಭಿಸಿ ಮಹಿಳಾ ಜಾನಪದ ಸಬಲೀಕರಣವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಶಾಲಾ ಕಾಲೇಜು ಪಠ್ಯ ಪುಸ್ತಕದಲ್ಲಿ ಹೆಚ್ಚಾಗಿ ಜನಪದ ಪದ್ಯ ಗದ್ಯಗಳನ್ನು ಅಳವಡಿಸಬೇಕು, ವಿಶ್ವವಿದ್ಯಾಲಯಗಳಲ್ಲೂ ಜಾನಪದ ಅಧ್ಯಯನ ಪೀಠಗಳು ಸ್ಥಾಪನೆ ಆಗಬೇಕೆಂದು ಡಾ.ಎಸ್.ಜನೊದ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಪಂಡಿತ ಅವಜಿ ಇಂಡಿ ತಾಲೂಕಿನ ಮೂಲ ಕಲೆ ಮತ್ತು ಕಲಾವಿದರು ಸಂರಕ್ಷಣೆಗೋಸ್ಕರ ಜಾನಪದ ಪರಿಷತ್ ತಾಲೂಕು ಘಟಕ ಕಾರ್ಯ ನಿರ್ವಹಿಸುತ್ತಿದ್ದು ಒಂದೆರೆಡು ದಿನದಲ್ಲಿ ಬೃಹತ್ ಜಾನಪದ ಸಮ್ಮೇಳನವನ್ನು ಏರ್ಪಡಿಸಲಾಗುತ್ತದೆ ಅಂತ ತಿಳಿಸಿದರು.
ಪತ್ರ ಪ್ರಧಾನ ಮಾಡಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಬಿರಾದರ್, ಇಂಡಿಯಲ್ಲಿ ಜಿಲ್ಲಾ ಮಹಿಳಾ ಸಮ್ಮೇಳನ ಏರ್ಪಡಿಸಲಾಗುವುದು, ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಕನ್ನಡ ಜಾನಪದ ಪರಿಷತ್ ಗ್ರಾಮ ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಇಂಡಿಯಾ ಕೆಜಿಎಸ್ ಶಾಲೆಯ ಮಕ್ಕಳು ಜೋಗಿತಿ ನೃತ್ಯ ಹಾಗೂ ಲಂಬಾಣಿ ನೃತ್ಯಗಳನ್ನು ಪ್ರದರ್ಶಿಸಿದರು.
ಮಹಿಳಾ ಮತ್ತು ಮಕ್ಕಳ ಕಿಶೋಭಿವೃದ್ಧಿ ಅಧಿಕಾರಿ ಗೀತಾ ಗುತ್ತರಿಗಿಮಠ,
ಬಿಸಿ ಊಟ ಯೋಜನೆ ಅಧಿಕಾರಿ ಸುಜಾತ ಪೂಜಾರಿ, ತಾಲೂಕು ಗೌರವಾಧ್ಯಕ್ಷೆ ಶೈಲಜಾ
ತೇಲ್ಲೂರು, ಎಸ್.ಆರ್ ಪಾಟೀಲ್, ದಾನಮ್ಮ ಮಠಪತಿ, ಬಿ.ಸಿ ಭಗವಂತ ಗೌಡರ್,ಸಾಗರ್ ಮನೆ ಮತ್ತಿತರರು ಉಪಸ್ಥಿತರಿದ್ದರು.
