ಮೈಸೂರು: ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶಿವರಾತ್ರಿ ಆಚರಣೆ ಮಾಡಲಾಯಿತು.
ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸರಸ್ವತೀ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಬಡಾವಣೆಯ ಎಲ್ಲಾ ನಿವಾಸಿಗಳು ಸೇರಿ ಸಾಮೂಹಿಕವಾಗಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮಾಡಿ ಧನ್ಯರಾದರು.
ಈ ಸಂದರ್ಭದಲ್ಲಿ ಬಡಾವಣೆಯ ಮಹಿಳೆಯರು ಶಿವನ ಹಲವಾರು ಹಾಡುಗಳನ್ನು ಹೇಳುತ್ತಾ ಸತ್ಸಂಗ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ,ಶಿವರಾತ್ರಿ ಆಚರಣೆ ಎಂಬುದು ಅತ್ಯಂತ ಪ್ರಭಾವವಾದುದು. ಸಮಾಜದಲ್ಲಿ ಇರುವ ಸಾಮರಸ್ಯದ ಕೊರತೆಯನ್ನು ನೀಗಿಸಲು ಇಂತಹಾ ಸಾಮೂಹಿಕ ಶಿವರಾತ್ರಿ ಆಚರಣೆ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.
ಶಿವ ನೆಂದರೆ ಸೃಷ್ಟಿಯ ಪುರುಷ, ಮಾನವನ ಮೃತ್ಯು ನಿವಾರಕ.
ಪರಶಿವನನ್ನು ಶಿವರಾತ್ರಿಯ ದಿನ ಸಾಮೂಹಿಕ ವಾಗಿ ಪೂಜೆ ಮಾಡುವುದು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಆರ್. ಗಣೇಶ್, ಉಪಾಧ್ಯಕ್ಷ ಎ. ಎನ್. ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ವೇದ ಬ್ರಹ್ಮ ಕಾರ್ತಿಕ್ ಶರ್ಮ ,ಮೂಕಾಂಬಿಕಾ ಸತ್ಸಂಗ ಬಳಗದ ಸದಸ್ಯರು, ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
